LIFESTYLE:
ಫೆಬ್ರವರಿ ಎಂದರೆ ಸಾಕು ಎಲ್ಲರಿಗೂ ನೆನಪಾಗುವುದೇ ಪ್ರೇಮಿಗಳ ದಿನ. ಪ್ರೀತಿ ಅಂದರೆ ಬರಿ ಟೈಮ್ ಪಾಸ್ ಆಗಲ್ಲ. ಅದೊಂದು ಮನಸ್ಸು, ಭಾವನೆಗಳ ಸಮ್ಮಿಲನ. ಹೀಗಾಗಿ ವ್ಯಾಲೆಂಟೈನ್ಸ್ ವಾರದ ಮೊದಲ ದಿನವೇ ಇಂದು ರೋಸ್ ಡೇ.
ಈ ದಿನ ಪ್ರೇಮಿಗಳು ಕೆಂಪು ಗುಲಾಬಿ ನೀಡಿ ಇಬ್ಬರು ಪರಸ್ಪರ ಪ್ರೀತಿ ಹಂಚಿಕೊಳ್ಳುವ ದಿನ. ಪ್ರೀತಿಗೊಂದು ಹೊಸ ಖುಷಿ ನೀಡುವ ದಿನ ಈ ರೋಸ್ ಡೇ. ದೀರ್ಘಾಕಾಲದ ತಪಸ್ಸು, ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಅದ್ಭುತ ಶಕ್ತಿ. ಈ ಸುಂದರ ಅನುಭೂತಿ ನೀಡುವ ಪ್ರೀತಿಗೆ ಒಂದು ದಿನ ಮೀಸಲಿಡಲೇಬೇಕು.
ಇನ್ನು ಪ್ರೀತಿಯು ಜೊತೆಗೆ ಅದೆಷ್ಟೋ ಜಗಳ, ಮುನಿಸು, ತಪ್ಪು ಕಲ್ಪನೆಗಳು ಕೂಡಿರುತ್ತದೆ. ಈ ವೇಳೆ ಈ ದಿನ ಪ್ರೀತಿಯಿಂದ ಒಂದು ಗುಲಾಬಿ ನೀಡಿದರೆ ಸಾಕು ಎಲ್ಲವೂ ನಿವಾರಣೆಯಾಗಿ ಬಿಡುತ್ತದೆ. ಅದಕ್ಕೆಂದೇ ವ್ಯಾಲೆಂಟೈನ್ಸ್ ವಾರದ ಮೊದಲ ದಿನ ರೋಸ್ ಡೇ ಆಚರಿಸುತ್ತಾರೆ. ಅದೇ ಇಂದು ಆಚರಿಸುವ ರೋಸ್ ಡೇ. ಪ್ರೀತಿ ಪಾತ್ರರಿಗೆ ಗುಲಾಬಿ ಹೂವು ನೀಡಿ ಹೊಸ ಉಲ್ಲಾಸ ನೀಡುವ ದಿನ. ಪ್ರೀತಿ ಗುಲಾಬಿಯಂತೆ. ಗುಲಾಬಿಯ ಮೃದುತ್ವ, ಸೌಂದರ್ಯದಂತೆ ಪ್ರೀತಿಯೂ ಕೂಡ ಗುಲಾಬಿಯ ಪಕಳೆಯಂತೆ ಹಂತಹಂತವಾಗಿ ಅರಳಿ ಸುಂದರ ಅನುಭವವನ್ನು ನೀಡುತ್ತದೆ.
ರೋಸ್ ಡೇ ಯ ಇತಿಹಾಸ:
ಪ್ರೀತಿಯ ಸಂಕೇತವಾದ ಗುಲಾಬಿಯನ್ನು ವಿಕ್ಟೋರಿಯನ್ನರು ಹೆಚ್ಚು ಬಳಕೆ ಮಾಡುತ್ತಿದ್ದರು. ಪ್ರೀತಿಯ ಭಾಗವಾಗಿ ಪ್ರೇಮಿಗಳು ಪರಸ್ಪರ ಗುಲಾಬಿಯನ್ನು ಬದಲಿಸಿಕೊಳ್ಳುವ ಅಭ್ಯಾಸವನ್ನು ಮಾಡಿಕೊಂಡಿದ್ದರು. ರೋಮನ್ ಸಂಸ್ಕೃತಿಯಲ್ಲಿ ಈ ರೋಸ್ ಡೇಯನ್ನು ಅಚರಿಸಲಾಗಿದೆ.