LIFESTYLE:
ಮಹಿಳೆಯರಿಗೆ ಪ್ರತಿ ತಿಂಗಳು ಬರುವ ಮುಟ್ಟಿನ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಹಿಂದೆ ಮಹಿಳೆಯರು ಬಟ್ಟೆಗಳನ್ನು ಬಳಸುತ್ತಿದ್ದರು. ಬಳಿಕ ಪ್ಯಾಡ್ ಗಳನ್ನು ಬಳಸಲು ಶುರು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್ ಮತ್ತು ಮುಟ್ಟಿನ ಕಪ್ ಗಳನ್ನು ಬಳಸಲು ಶುರುಮಾಡಿದ್ದಾರೆ. ಇದು ಭಾರೀ ರಕ್ತದ ಹರಿವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ಕೆಲವು ಮಹಿಳೆಯರಿಗೆ ಈ ಬಗ್ಗೆ ನಿಖರವಾದ ಮಾಹಿತಿ ತಿಳಿದಿಲ್ಲ. ಕೆಲವರು ಇದರ ತಪ್ಪು ಕಲ್ಪನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ.ಅದು ಏನೆಂಬದನ್ನು ತಿಳಿಯೋಣ.
-ಕೆಲವು ಮಹಿಳೆಯರು ಮುಟ್ಟಿನ ಕಪ್ ಖಾಸಗಿ ಭಾಗದಲ್ಲಿ ಸಿಲುಕಿಕೊಳ್ಳುತ್ತದೆ ಎಂದು ಹೆದರುತ್ತಾರೆ. ಅಥವಾ ಜಾರಿಹೋಗುತ್ತದೆ ಎಂದು ಭಯಪಡುತ್ತಾರೆ. ಆದರೆ ಹೀಗೆ ಆಗುವುದಿಲ್ಲ ಮಾರುಕಟ್ಟೆಯಲ್ಲಿ ವಿಭಿನ್ನ ಗಾತ್ರದ ಮುಟ್ಟಿನ ಕಪ್ ಗಳು ಲಭ್ಯವಿದೆ. ಆದ್ದರಿಂದ ನೀವು ನಿಮಗಾಗಿ ಸರಿಯಾದುದನ್ನೇ ಆರಿಸಿ.
-ಕೆಲವು ಮಹಿಳೆಯರು ಮುಟ್ಟಿನ ಕಪ್ ಅನ್ನು ಧರಿಸಿದ ಬಳಿಕ ಮೂತ್ರ ವಿಸರ್ಜನೆ ಮಾಡಲು ಆಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ಯೋನಿ ಮತ್ತು ಮೂತ್ರನಾಳ ಬೇರೆ ಬೇರೆಯಾಗಿದೆ. ಹಾಗಾಗಿ ಯೋನಿಯಲ್ಲಿ ರಕ್ತಸ್ರಾವವಾಗುವುದರಿಂದ ಮುಟ್ಟಿನ ಕಪ್ ಅನ್ನು ಅಲ್ಲಿ ಧರಿಸುತ್ತಾರೆ ವಿನಃ ಮೂತ್ರನಾಳದಲ್ಲಿ ಅಲ್ಲ. ಹಾಗಾಗಿ ಮೂತ್ರ ವಿಸರ್ಜಿಸಬಹುದು.
-ಕೆಲವು ಮಹಿಳೆಯರು ಮುಟ್ಟಿನ ಕಪ್ ಗಳನ್ನು ರಾತ್ರಿ ಬಳಸಬಾರದು. ಇದರಿಂದ ರಕ್ತಸ್ರಾವ ಸರಿಯಾಗಿ ಆಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ಇದು ಸುಳ್ಳು. ಮುಟ್ಟಿನ ಕಪ್ ಗಳನ್ನು ಯಾವಾಗ ಬೇಕಾದರೂ? ಎಲ್ಲಿ ಬೇಕಾದರೂ? ಧರಿಸಬಹುದು. ಮುಟ್ಟಿನ ಕಪ್ ಸುಮಾರು 8-12 ಗಂಟೆಗಳ ಕಾಲ ಪೀಕ್ ಪ್ರೂಫ್ ರಕ್ಷಣೆಯನ್ನು ನೀಡುತ್ತದೆ.
-ಕೆಲವು ಮಹಿಳೆಯರು ಮುಟ್ಟಿನ ಕಪ್ ಗಳು ಗರ್ಭಕೋಶದ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಈ ಕಪ್ ಗಳನ್ನು 100 ಪ್ರತಿಶತ ವೈದ್ಯಕೀಯದಲ್ಲಿ ಬಳಸುವ ಸಿಲಿಕೋನ್ ನಿಂದ ತಯಾರಿಸಲಾಗುತ್ತದೆ. ಇದು ಸುರಕ್ಷಿತವಾಗಿದೆ. ಇದರಿಂದ ಯಾವುದೇ ಸಮಸ್ಯೆ ಕಾಡಲ್ಲ. ಆದರೆ ಅದನ್ನು ಸರಿಯಾಗಿ ಬಳಸಲು ಕಲಿಯಿರಿ.