LIFESTYLE:
ಪೋರ್ಟೊ ರಿಕೊ : ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ ಅವರು 2021ರ ವಿಶ್ವ ಸುಂದರಿ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಪೋರ್ಟೊ ರಿಕೊದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ರ ವಿಶ್ವಸುಂದರಿ ಜಮೈಕಾದ ಟೋನಿ–ಅನ್ ಸಿಂಗ್ ಅವರು ಕರೋಲಿನಾ ಬಿಲಾವ್ಸ್ಕಾ ಅವರಿಗೆ ಕಿರೀಟ ತೊಡಿಸಿದರು.
ಅಮೆರಿಕದ ಶ್ರೀ ಸೈನಿ ಮೊದಲ ರನ್ನರ್ ಅಪ್ ಎನಿಸಿಕೊಂಡರು. ಕೋಟ್ ಡಿ ಐವೊರ್ನ ಒಲಿವಿಯಾ ಯೇಸ್ ಎರಡನೇ ರನ್ನರ್ ಅಪ್ ಪ್ರಶಸ್ತಿ ಪಡೆದರು.
ಭಾರತವನ್ನು ಪ್ರತಿನಿಧಿಸಿದ್ದ ಮಾನಸಾ ವಾರಾಣಸಿ ಸೆಮಿಫೈನಲ್ಗೆ ಪ್ರವೇಶಿಸಿ ಗಮನ ಸೆಳೆದರು. ವಿಶ್ವಸುಂದರಿ ಸ್ಪರ್ಧೆಯನ್ನು ಈ ಹಿಂದೆ 2021ರ ಡಿಸೆಂಬರ್ ರಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಭಾರತದ ಸ್ಪರ್ಧಿ ಮಾನಸ ವಾರಾಣಸಿ ಸೇರಿದಂತೆ ಹಲವರಿಗೆ ಕೋವಿಡ್ ದೃಢಪಟ್ಟಿದ್ದರಿಂದ ಅಂತಿಮ ಸುತ್ತಿನ ಸ್ಪರ್ಧೆಯನ್ನು ಮುಂದೂಡಲಾಗಿತ್ತು.