LIFESTYLE:
ಬೇಕಾಗುವ ಸಾಮಾಗ್ರಿಗಳು
ಸಬ್ಬಕ್ಕಿ- 1 ಬಟ್ಟಲು
ಸಾಸಿವೆ- ¼ ಟೀ ಸ್ಪೂನ್
ಕರಿಬೇವು-ಸ್ವಲ್ಪ
ಜೀರಿಗೆ-ಸ್ವಲ್ಪ
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು- ಸ್ವಲ್ಪ
ಕಡಲೆಕಾಯಿ ಬೀಜ- 1ಬಟ್ಟಲು (ಹುರಿದು ಪುಡಿ ಮಾಡಿದ್ದು)
ಮಾಡುವ ವಿಧಾನ: ಸಬ್ಬಕ್ಕಿಯನ್ನು ತೊಳೆದು 3ರಿಂದ ನಾಲ್ಕು ಗಂಟೆಗಳ ಕಾಲ ಸಬ್ಬಕ್ಕಿ ಮುಳುಗುವಷ್ಟು ನೀರು ಹಾಕಿ ನೆನೆಸಿಟ್ಟುಕೊಳ್ಳಬೇಕು. ಬಳಿಕ ಒಂದು ಬಾಣಲೆಗೆ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ, ಕರಿಬೇವು, ಜೀರಿಗೆ ಹಾಕಿ ಹುರಿದುಕೊಳ್ಳಿ. ನಂತರ ನೆನೆಸಿಟ್ಟ ಸಬ್ಬಕ್ಕಿಯನ್ನು ಹಾಕಿ ಸಣ್ಣ ಉರಿಯಲ್ಲಿ ಸಬ್ಬಕ್ಕಿ ನೀರಿನ ಬಣ್ಣ ತಿರುಗುವವರೆಗೆ ಬಿಸಿ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಪುಡಿ ಮಾಡಿಟ್ಟುಕೊಂಡಿರುವ ಕಡಲೆಕಾಯಿ ಬೀಜದ ಪುಡಿ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಸಬ್ಬಕ್ಕಿ ಕಿಚಡಿ ಸವಿಯಲು ಸಿದ್ಧ.