LIFESTYLE:
ಬೇಸಿಗೆಯಲ್ಲಿ ಮುಖದ ಕಾಂತಿ ಬಗ್ಗೆ ಇರಲಿ ಗಮನಪ್ರತಿಯೊಬ್ಬರಿಗೂ ಸುಂದರವಾಗಿ ಕಾಣಬೇಕು ಎಂಬ ಹಂಬಲವಿರುತ್ತದೆ. ಹೀಗಾಗಿ ನಾನಾ ಕಸರತ್ತು ಮಾಡುತ್ತಾರೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಮುಖದ ಕಾಂತಿಯನ್ನು ಕಾಪಾಡಿಕೊಳ್ಳುವುದು ಬಾರಿ ಕಷ್ಟವಾಗುತ್ತದೆ. ಹೀಗಾಗಿ ತ್ವಚೆ ಮತ್ತು ಚರ್ಮದ ಆರೈಕೆ ಮಾಡುವುದು ಒಳ್ಳೆಯದು. ಆದರೆ ಯಾವ ರೀತಿ ಮುಖದ ಬಗ್ಗೆ ಕಾಳಜಿ ವಹಿಸಬೇಕೆಂಬುದು ಇಲ್ಲಿದೆ.
ತ್ವಚೆಯನ್ನು ಶುದ್ಧೀಕರಿಸಿ
ಹೊರಗಿನ ಬಿಸಿಲು, ಗಾಳಿ, ಪ್ರದೂಷಣೆಗೆ ಚರ್ಮವು ಸಾಕಷ್ಟು ಹಾನಿಗೊಳಗಾಗಿರುತ್ತದೆ. ಇದಕ್ಕೆ ಚಿಕಿತ್ಸೆ ನೀಡಲು ತ್ವಚೆಯನ್ನು ದಿನಕ್ಕೆ 2 ಬಾರಿ ಶುದ್ಧೀಕರಿಸುವುದು ಉತ್ತಮ. ಪ್ರತಿ ನಿತ್ಯ ಬೆವರಿನ ಕಾರಣ ಸ್ನಾನ ಮಾಡುವುದನ್ನು ತಪ್ಪಿಸದಿರಿ.
ಟೋನರ್ ಬಳಸಿ
ನಿಮ್ಮ ತ್ವಚೆಯ ರಂಧ್ರಗಳು ಬೆವರು ಮತ್ತು ಕೊಳಕು ಸಂಗ್ರಹವಾಗುವುದರಿಂದ ಅವು ದೊಡ್ಡದಾಗಬಹುದು. ನಿಮ್ಮ ರಂಧ್ರಗಳು ಇನ್ನೂ ತೆರೆದಿರುವಾಗ ಶುದ್ಧೀಕರಣದ ನಂತರ ಟೋನರ್ ಮಾಡುವುದರಿಂದ ತ್ವಚೆಯ pH ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಟೋನರ್ ಪ್ರತಿನಿತ್ಯ ಬಳಸುವುದರಿಂದ ದಿನವಿಡೀ ಚರ್ಮವು ಹೊಳಪಿನಿಂದ ಕೂಡಿರುತ್ತದೆ. ಟೋನರ್ ರಂಧ್ರಗಳನ್ನು ಬಿಗಿಗೊಳಿಸುತ್ತದೆ.
ಮಾಯಿಶ್ಚರೈಸರ್ ಬಳಸಿ
ಎಣ್ಣೆ ಚರ್ಮ ಅಥವಾ ಒಣ ಚರ್ಮ ಯಾವುದೇ ಆಗಿರಲಿ ಚರ್ಮಕ್ಕೆ ಮಾಯಿಶ್ಚರೈಸರ್ ಬಳಸುವುದನ್ನು ಮರೆಯದಿರಿ. ಚರ್ಮಕ್ಕೆ ಮಾಯಿಶ್ಚರೈಸರ್ ಬಳಸುವುದರಿಂದ ತೇವಾಂಶ ನೀಡುತ್ತದೆ. ಕೇವಲ ಮುಖಕ್ಕೆ ಮಾತ್ರವಲ್ಲ ಕೈಗಳು ಮತ್ತು ಕಾಲುಗಳಿಗೂ ಮಾಯಿಶ್ಚರೈಸರ್ ಅಪ್ಲೈ ಮಾಡಬೇಕು. ಇದು ಚರ್ಮವನ್ನು ಸಂಪೂರ್ಣವಾಗಿ ಮೃದುಗೊಳಿಸುತ್ತದೆ.