UNCATEGORIZED: ಮಂಗಳೂರು : ಕೊರೋನಾ ನಿಯಂತ್ರಣ ಹಿನ್ನೆಲೆ ರಾಜ್ಯಾದ್ಯಂತ ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಯುತ್ತಿದ್ದರೂ ಸಾರ್ವಜನಿಕರಿಗೆ ಲಸಿಕೆ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಲಸಿಕಾ ಕೇಂದ್ರ ಮುಂಭಾಗ ಜನರ ಸಾಲು ಕಂಡುಬರುತ್ತಿದೆ. ಬಿಜೆಪಿ ಶಾಸಕರು, ಸಂಸದರು, ತಮ್ಮವರಿಗೆ ಲಸಿಕೆ ನೀಡುತ್ತಿದ್ದಾರೆ ಎಂದು ಮಾಜಿ ವಿಧಾನ್ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಸಂಸದರು, ಶಾಸಕರ ಕಛೇರಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಲಭ್ಯ ಎಂಬ ಬ್ಯಾನರ್ ಕಾಣುತ್ತಿದೆ. ಲಸಿಕೆಯನ್ನು ಸರ್ಕಾರ ಉಚಿತವಾಗಿ ನೀಡಬೇಕು. ಆದರೆ ಇಲ್ಲಿ ಜನಸಾಮ್ಯಾನರು ಶಾಸಕರು ಮತ್ತು ಸಂಸದರ ಹತ್ತಿರ ಹೋದ್ರೆ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಿರಿ ಅನ್ನುತ್ತಾರೆ. ಹದಿಮೂರು ತಿಂಗಳಲ್ಲಿ ದೇಶದ ಶೇಕಡಾ ಹತ್ತರಷ್ಟು ಜನರಿಗೆ ಲಸಿಕೆ ಆಗಿಲ್ಲ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ಯಾರಿಗೆ ಬೇಕಾದರೂ ಲಸಿಕೆ ಸಿಗುತ್ತೆ. ಇಲ್ಲಿ ಬಿಜೆಪಿ ಸರ್ಕಾರ ಲಸಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದರು. ಲಸಿಕೆಯಲ್ಲೂ ಬಿಜೆಪಿ ವ್ಯಾಪಾರ ಮಾಡುವ ಚಾಳಿಯಲ್ಲಿದೆ. ಜಿಲ್ಲೆಗೆ ಬಂದ ಲಸಿಕೆ ಬಗ್ಗೆ ಮಾಹಿತಿ ನೀಡಿ ಎಂದು ಒತ್ತಾಯಿಸಿದ ಅವರು, ಬಿಜೆಪಿ ಕಾಂಗ್ರೆಸ್ ಗೆ ರಾಜ ಧರ್ಮದ ಪಾಠ ಮಾಡುತ್ತೆ. ಬಿಜೆಪಿಯಿಂದ ನಮಗೆ ರಾಜ ಧರ್ಮದ ಅಗತ್ಯತೆ ಇಲ್ಲ. ಇವರು ರಾಜ ಧರ್ಮ ಹೇಳುವ ಬದಲು ಜನರ ಸೇವೆಗೆ ಮುಂದಾಗಲಿ ಎಂದು ಆಗ್ರಹಿಸಿದರು. ಪಕ್ಷದ ಬಿಕ್ಕಟ್ಟಿನಿಂದ ರಾಜ್ಯದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ನೆರೆ ವೇಳೆ ರಾಜ್ಯಕ್ಕೆ ನೆರೆ ಪರಿಹಾರ ಘೋಷಣೆ ಮಾಡಿದ್ದರು. ಒಂದೇ ಒಂದು ಮನೆಗೆ ಐದು ಲಕ್ಷ ಪರಿಹಾರ ಲಭಿಸಿಲ್ಲ. ಲಸಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷ ಲಸಿಕೆ ವಿರುದ್ಧ ಪ್ರತಿಭಟನೆ ಮಾಡಲಿದೆ. ಮಂಗಳೂರಿನ ಬಿಜೈ ಲಸಿಕಾ ಕೇಂದ್ರ ಮುಂಭಾಗ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದೇವೆ. ಸೋಮವಾರದಂದು ಮುಂಜಾನೆ 9 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಮಂಗಳೂರಿನಲ್ಲಿ ಮಾಜಿ ಎಂಎಲ್ಸಿ ಐವನ್ ಡಿಸೋಜಾ ಹೇಳಿದ್ದಾರೆ.