UNCATEGORIZED: ಉತ್ತರ ಪ್ರದೇಶ ಸರ್ಕಾರದ ಮತ್ತೊಂದು ಅಧ್ವಾನ ಬಯಲಾಗಿದೆ. ಗಂಗಾನದಿ ಬಯಲು ಪ್ರದೇಶದಲ್ಲಿ ಹೂಳಲಾಗಿದ್ದ ಶವಗಳ ಸಮಾಧಿಗೆ ಹೊದೆಸಲಾಗಿದ್ದ ಕೇಸರಿ, ಕೆಂಪು ಬಟ್ಟೆಗಳನ್ನು ಹೂತಲ್ಲಿಂದಲೇ ಎಳೆದು ತೆಗೆಯುತ್ತಿದೆ. ಇದೂ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಗಾನದಿಯ ಬಯಲು ಪ್ರದೇಶದಲ್ಲಿ ಆಳಕ್ಕೆ ಹೂಳದ ಸಾವಿರಾರು ಶವಗಳನ್ನು ನಾಯಿನರಿಗಳು ಎಳೆದಾಡಿ ಮೇಲೆದ್ದು ಕಾಣುತ್ತಿದ್ದುದು ಈ ಹಿಂದೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ದೇಶದಲ್ಲಿನ ಸಂಸ್ಕಾರವಂತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಶವಗಳನ್ನು ಹೂತಲ್ಲಿ ಹೆಚ್ಚಾಗಿ ಕೆಂಪು ಮತ್ತು ಕೇಸರಿ ಬಟ್ಟೆಗಳನ್ನು ಹೊದಿಸಿದ್ದರಿಂದ ದೂರ ದೂರಕ್ಕೂ ಕಾಣುವಂತಾಗಿ ಆಳುವ ಸರ್ಕಾರ ಮುಜುಗರಕ್ಕಿಡಾಯಿತು. ಈಗ ಸರ್ಕಾರ ಮುಜುಗರದಿಂದ ಪಾರಾಗಲು ಶವಗಳ ಸಮಾಧಿಗೆ ಹೊದಿಸಿದ್ದ ಕೇಸರಿ ಮತ್ತು ಕೆಂಪು ಬಟ್ಟೆಗಳನ್ನು ಹೂತಲ್ಲಿಂದಲೇ ಎಳೆದು ತೆಗೆಯುತ್ತಿದೆ. ಕೊರೊನಾ ಎರಡನೇ ಅಲೆ ಬರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದರು ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಮೈಮರೆತು ಇಂತಹ ಅಮಾನವೀಯ ಪರಿಸ್ಥಿತಿಯನ್ನು ಎದುರಿಸುವಂತಾಗಿ ಮರಣ ಹೊಂದಿದ ಮೇಲೆಯು ಅಂತಿಮ ಸಂಸ್ಕಾರ ವಿಧಿ ನೆರವೇರಿಸಲಾಗದೆ ಜನ ತಮ್ಮ ಬಂಧುಗಳ ಇಂತಹ ಸ್ಥಿತಿಯ ಬಗ್ಗೆ ಮರುಕ ಪಡುತ್ತಿದ್ದಾಗಲೆ ಉತ್ತರ ಪ್ರದೇಶದ ಯೋಗಿ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಶವಗಳ ಮೇಲೆ ಹೊದಿಸಿದ ಬಟ್ಟೆಗಳನ್ನು ಕೂಡ ಎಳೆದು ತೆಗೆಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.