UNCATEGORIZED: ಕಾರವಾರ : ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಶಾಸಕರ ಅನುದಾನದಲ್ಲಿ ಆಂಬ್ಯುಲೆನ್ಸ್ ಅನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ರವರು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಲ್ಲಾಪುರಕ್ಕೆ ನಾಲ್ಕು ಅಂಬುಲೆನ್ಸ್ ಖರೀದಿಸಿದ್ದಾರೆ. ಖರೀದಿಸಿದ ಆಂಬ್ಯುಲೆನ್ಸ್ ಗಟ್ಟುಮಟ್ಟಾಗಿದೆಯೇ ಎಂದು ಪರೀಕ್ಷಿಸಲು ತಾವೇ ಸ್ವತಃ ಹೊಸದಾಗಿ ಬಂದ ಆಂಬ್ಯುಲೆನ್ಸ್ ಏರಿ ವಾಹನ ಚಲಾಯಿಸಿ ಟ್ರಯಲ್ ನೋಡಿದರು. ಯಲ್ಲಾಪುರದ ಪ್ರವಾಸಿ ಮಂದಿರದಿಂದ ಯಲ್ಲಾಪುರ ನಗರವನ್ನು ಒಂದು ಸುತ್ತುಹಾಕಿ ನಂತರ ಆಂಬ್ಯುಲೆನ್ಸ್ ಅನ್ನು ಚಾಲನೆ ನೀಡಿದರು. ಸಚಿವ ಶಿವರಾಮ್ ಹೆಬ್ಬಾರ್ ಅವರು ತಮ್ಮ ವೃತ್ತಿಯನ್ನು ಮೊದಲು ಲಾರಿ ಚಾಲಕರಾಗಿ ಆರಂಭಿಸಿದರು. ನಂತರ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೆಲವು ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ಗೆ ಬರುವ ಮೂಲಕ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಅದಾದ ನಂತರ ಪುನಃ ಬಿಜೆಪಿಗೆ ಬರುವ ಮೂಲಕ ಇಂದು ರಾಜ್ಯ ಕಾರ್ಮಿಕ ಸಚಿವರಾಗಿದ್ದಾರೆ. ಇನ್ನು ಟ್ರಯಲ್ ನೋಡಿದ ಹೆಬ್ಬಾರ್ ತಮ್ಮ ಅನುದಾನದಲ್ಲಿ ಅಲ್ಲದೇ,ಕ್ಷೇತ್ರಕ್ಕೆ ತಮ್ಮ ಹಣದ ಮೂಲಕ ಹೊಸ ಆಂಬ್ಯುಲೆನ್ಸ್ ಖರೀದಿಗೆ ಇದೀಗ ಮುಂದಾಗಿದ್ದಾರೆ.ಇನ್ನು ಹೆಬ್ಬಾರ್ ಅಂಬ್ಯುಲೆನ್ಸ್ ಚಾಲನೆ ಮಾಡುತ್ತಿರುವ ವಿಡಿಯೋ ಇದೀಗ ಜಿಲ್ಲೆಯಲ್ಲಿ ವೈರಲ್ ಆಗತೊಡಗಿದೆ.