COLUMNS:
ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅದ್ಭುತವಾದ ಟ್ವೀಟ್ ಒಂದನ್ನು ಮಾಡಿದ್ದಾರೆ. ಎಂಟ್ಹತ್ತು ವರ್ಷದ ಬಾಲಕನೊಬ್ಬ ನದಿ ದಂಡೆಗೆ ಬಂದು ಮೀನು ಹಿಡಿಯುವ ವಿಡಿಯೋ ಇರುವ ಟ್ವೀಟ್ ಅದು.
ಈ ವಿಡಿಯೋದಲ್ಲಿ ಬಾಲಕನೊಬ್ಬ ಮೀನು ಹಿಡಿಯುವ ರೀಲು ರಾಡು ಗಾಳವನ್ನು ಹಿಡಿದು ನದಿ ತೀರಕ್ಕೆ ಬರುತ್ತಾನೆ. ಗಾಳದ ಮುಳ್ಳಿಗೆ ಹಿಟ್ಟಿನ ಉಂಡೆಯನ್ನು ಕಟ್ಟಿ ಅದನ್ನು ನದಿಗೆ ಎಸೆಯುತ್ತಾನೆ. ಕಾಯುತ್ತಿದ್ದಂತೆಯೇ ಎರಡು ದೊಡ್ಡ ಮೀನುಗಳು ಅವನ ಗಾಳಕ್ಕೆ ಸಿಲುಕಿರುತ್ತವೆ. ಅವುಗಳನ್ನು ಹಿಡಿದ ಬಾಲಕ ಅದನ್ನು ಚೀಲಕ್ಕೆ ಸೇರಿಸುತ್ತಾನೆ!
ಎಂಥ ಅರ್ಥಗರ್ಭಿತವಾದ ಟ್ವೀಟ್ ಇದು. ಮೀನನ್ನು ಕೊಟ್ಟರೆ ಅದು ಅಗಿನ ಊಟಕ್ಕೆ ಮಾತ್ರ ಆಗುತ್ತದೆ. ಮೀನು ಹಿಡಿಯುವುದನ್ನು ಕಲಿಸಿದರೆ ಅವನ ಜೀವನದುದ್ದಕ್ಕೂ ಊಟ ಮಾಡಬಹುದು. ಈ ವಿಡಿಯೋ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಹೇಳುವಂತೆ ಮೀನು ಹಿಡಿಯುವ ಈ ಕಿರುಚಿತ್ರಕ್ಕೆ ಯಾವುದೇ ಸಂಭಾಷಣೆಯೂ ಬೇಕಾಗಿಲ್ಲ. ಇಲ್ಲಿ ವಿಡಿಯೋ ಹೇಳುವುದು ಶ್ರದ್ದೆ, ಬುದ್ದಿವಂತಿಕೆ ಮತ್ತು ತಾಳ್ಮೆ ಈ ಮೂರು ಗುಣಗಳಿದ್ದರೆ ಜೀವನದಲ್ಲಿ ಗೆಲ್ಲಬಹುದು ಎಂಬುದನ್ನು ಎಂದಿದ್ದಾರೆ. ನಿಜ ಅಲ್ಲವೆ?