ಈ ಕ್ಷಣ :

ಹನ್ನೆರಡು ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸಿದರೂ, ಕಾಶ್ಮೀರಿ ಪಂಡಿತರಿಗೇಕೆ ನ್ಯಾಯ ಒದಗಿಸಿಲ್ಲ ಬಿಜೆಪಿ?

Published 15 ಮಾರ್ಚ್ 2023, 23:30 IST
Last Updated 15 ಮಾರ್ಚ್ 2023, 23:30 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

COLUMNS:

----------ಎಂ ಹೈದರ್----------

ತಾನು ಹುಟ್ಟಿದ ಊರು, ಬೆಳೆದ ಪರಿಸರದಿಂದ ಯಾರೋ ಒಡ್ಡಿದ ಬೆದರಿಕೆಗೆ ಜೀವ ಉಳಿಸಿಕೊಳ್ಳಲು ಊರು ತೊರೆದಿದ್ದರೆ, ಹುಟ್ಟೂರಿಗೆ ಮರಳುವ ಸೆಳೆತ ಯಾರಿಗಿರುವುದಿಲ್ಲ? ತಾನು ಹುಟ್ಟಿ ಬೆಳೆದ ನೆಲದಲ್ಲಿ ಬದುಕುವ ಹಕ್ಕು ಭೂಮಿಯಲ್ಲಿ ಪ್ರತಿಯೊಬ್ಬ ಮನುಷ್ಯನ ಹಕ್ಕು. ದೇಶ ಸೀಮೆಗಳಾಚೆ ತಲುಪಿದರೂ ತನ್ನ ನೆಲದ ಸೆಳೆತದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಳೆದ ಮೂರು ದಶಕಗಳ ಹಿಂದೆ ಮತ್ತು ಅನಂತರ ಕಾಶ್ಮೀರ ತೊರೆದ ಕಾಶ್ಮೀರಿ ಪಂಡಿತರ ಕುಟುಂಬಗಳು ಇದಕ್ಕೆ ಹೊರತಲ್ಲ.

1989-90ರಲ್ಲಿ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳು ಕಾಶ್ಮೀರಿ ಪಂಡಿತರಿಗೆ ಕಣಿವೆ ತೊರೆಯುವಂತೆ ಬೆದರಿಕೆ ಹಾಕಿದ್ದರಿಂದ ಅನೇಕರು ಜೀವ ಉಳಿಸಿಕೊಳ್ಳಲು ರಾತ್ರೋರಾತ್ರಿ ದೇಶದ ಇತರೆಡೆಗೆ ವಲಸೆ ಹೋದರು. ಪ್ರತ್ಯೇಕವಾದಿಗಳು ಕೇವಲ ಬೆದರಿಕೆ ಮಾತ್ರ ಹಾಕಲಿಲ್ಲ. ಅನೇಕ ಅಮಾಯಕರನ್ನು ಹತ್ಯೆ ಮಾಡಿದ್ದರು. ಅವರ ಆಸ್ತಿಪಾಸ್ತಿಗಳನ್ನು ಲೂಟಿ ಮಾಡಿದ್ದರು. ಕಣಿವೆಯ ಆ ಭೀಬತ್ಸ ದಿನಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಬೆಂಬಲದ ಸರ್ಕಾರ ಅಧಿಕಾರದಲ್ಲಿತ್ತು. ವಿ.ಪಿ.ಸಿಂಗ್ ಪ್ರಧಾನ ಮಂತ್ರಿಯಾಗಿದ್ದರು.

ಪ್ರತ್ಯೇಕವಾದಿಗಳು ಪಂಡಿತರನ್ನು ಅಮಾನುಷವಾಗಿ ಹಿಂಸಿಸುತ್ತಿದ್ದರು. ಹಿಂದುಗಳ ರಕ್ಷಣೆಯ ಜಪ ಮಾಡುವ ಬಿಜೆಪಿ ಅಂದಿನ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳಲಿಲ್ಲ ಅಥವಾ ಕಾಶ್ಮೀರಿ ಪಂಡಿತರ ರಕ್ಷಣೆಗೆ ಪಟ್ಟು ಹಿಡಿದು ಬದ್ದತೆ ತೋರಲಿಲ್ಲ ಬದಲಿಗೆ ಅಧಿಕಾರದ ಪಾಲುದಾರಿಕೆಯನ್ನು ಕಳೆದುಕೊಳ್ಳಲು ಸಿದ್ದವಿಲ್ಲದೆ ಲಂಪಟತನದಿಂದ ಜಾಣ ಕುರುಡು ಪ್ರದರ್ಶಿಸಿತು.

1990ರಿಂದೀಚೆಗೆ ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿಯು ಅಧಿಕಾರಕ್ಕೆ ಬಂದರೆ, ಕಾಶ್ಮೀರಿ ಪಂಡಿತರ ಘರ್ ವಾಪ್ಸಿ ಮತ್ತು ಅವರ ಪುನರ್ವಸತಿ ಮಾಡುವುದಾಗಿ ಘೋಷಿಸುತ್ತಲೇ ಬಂದಿದೆ, ಬಿಜೆಪಿ ಮತ್ತು ಆರ್ ಎಸ್ಎಸ್ ನ ಹಿಂದುತ್ವ ಮತ್ತು ರಾಷ್ಟ್ರವಾದಿ ಹುಸಿ ಅಜೆಂಡಾವನ್ನು ನಂಬಿ ಅವರ ಆಮಿಷಕ್ಕೆ ಪದೇ ಪದೇ ಬಲಿಯಾಗಿ ಅವರಿಂದ ವಂಚನೆಗೊಳಗಾದವರು ಈ ಕಾಶ್ಮೀರಿ ಪಂಡಿತರು.

ಕಳೆದ ಮೂರು ದಶಕಗಳಿಂದ ಇದುವರೆಗೂ ಸುಮಾರು ಹನ್ನೆರಡೂವರೆ ವರ್ಷ ಹಿಂದುತ್ವದ ಅಜೆಂಡಾದಲ್ಲಿ ಬಿಜೆಪಿ ಅಧಿಕಾರ ನಡೆಸಿದೆ ಮತ್ತು ನಡೆಸುತ್ತಿದೆ. ಆದರೆ ಕಾಶ್ಮೀರಿ ಪಂಡಿತರ ಬದುಕಿನ ಹಿತಕ್ಕಾಗಿ ಬಿಜೆಪಿಯೂ ಸೇರಿದಂತೆ ಯಾವ ರಾಜಕೀಯ ಪಕ್ಷಗಳು ಕೂಡ ಬದ್ದತೆಯಿಂದ ಅವರ ಹಿತ ಕಾಯಲಿಲ್ಲ. ಬದಲಿಗೆ ಹಿಂದೂ ಮುಸ್ಲಿಮರ ನಡುವೆ ಪರಸ್ಪರ ದ್ವೇಷ ಮತ್ತು ಭಯದ ಬೀಜ ಬಿತ್ತಿ ಅದರ ಬೆಂಕಿಯ ಜ್ವಾಲೆಯಲ್ಲಿ ಅಮಾಯಕರನ್ನು ಬಲಿ ಪಡೆಯುತ್ತಾ, ಅವು ಬದುಕುತ್ತಿವೆ.

ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಿ ಪಿಡಿಪಿ ಮುಸ್ಲಿಂ ಧೃವೀಕರಣದ ರಾಜಕೀಯ ಮಾಡಿದರೆ. ಕಾಶ್ಮೀರಿ ಪಂಡಿತರ ವಿಷಯದಲ್ಲಿ ಬಿಜೆಪಿ ಹಿಂದು ಧೃವೀಕರಣದ ರಾಜಕೀಯ ಮಾಡಿ ಚುನಾವಣೆಯಲ್ಲಿ ಗೆದ್ದ ನಂತರ, ಎರಡು ವಿರುದ್ಧ ದಿಕ್ಕಿಗೆ ಮತ ಚಲಾಯಿಸಿದ ಮತದಾರರನ್ನು ಮೂರ್ಖರನ್ನಾಗಿಸಿ ಉಭಯ ಪಕ್ಷಗಳು ಒಂದಾಗಿ ಅಧಿಕಾರ ಅನುಭವಿಸುತ್ತವೆ.

370 ನೇ ವಿಧಿಯನ್ನು ರದ್ದುಪಡಿಸಿ ಉಗ್ರರು ಮತ್ತು ಪ್ರತ್ಯೇಕತಾವಾದಿಗಳಿಂದ ರಕ್ಷಣೆ ನೀಡಿ
ವಲಸೆ ಹೋಗಿ ನಾನಾ ಕಡೆ ನೆಲೆಸಿರುವ ಸುಮಾರು ಏಳು ಲಕ್ಷ ಪಂಡಿತರು ಮತ್ತು ಹಿಂದೂಗಳನ್ನು ಘರ್ ವಾಪ್ಸಿ ಮಾಡಿ ಕಾಶ್ಮೀರವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಎಂದಿದ್ದ ಬಿಜೆಪಿ, ಕಳೆದ ಎರಡು ವರ್ಷಗಳಿಂದ ಕಾಶ್ಮೀರಿಗಳಿಗೆ ಏನಾದರೂ ಕೊಡುವುದಕ್ಕಿಂತ ಅವರ ನೆಮ್ಮದಿ, ಅವರ ಉದ್ಯೋಗ ಅವರ ಬದುಕು ಎಲ್ಲವನ್ನೂ ಕಿತ್ತುಕೊಂಡಿದೆ.

370 ವಿಧಿಯನ್ನು ರದ್ದು ಗೊಳಿಸಿದ ಸಂದರ್ಭದಲ್ಲಿ ಗೃಹಮಂತ್ರಿ ಕಾಶ್ಮೀರದಲ್ಲಿ 3000 ಉದ್ಯೋಗ ನೀಡುವ ಭರವಸೆ ನೀಡಿದ್ದರು ಆದರೆ ದಾಖಲೆಗಳ ಪ್ರಕಾರ ಕೇವಲ 604 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿದೆ. 2015 ರಲ್ಲಿ 1080 ಕೋಟಿ ಪ್ಯಾಕೇಜ್ ಘೋಷಣೆ ಮಾಡಿತ್ತು ಆದರೆ ಇದರ ಫಲಾನುಭವಿ ಪಂಡಿತರು ಕಾಣುತ್ತಿಲ್ಲ.

2008ರಲ್ಲಿ ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 1600 ಕೋಟಿ ರೂಪಾಯಿ ಮೊತ್ತದ ಯೋಜನೆ ಪ್ರಕಟಿಸಿ ಕಣಿವೆಗೆ ವಾಪಸ್ ಬರುವ ಪಂಡಿತರಿಗೆ ಆರು ಸಾವಿರ ಉದ್ಯೋಗಗಳನ್ನು ಸೃಷ್ಟಿಸಿ. ಸ್ವಲ್ಪವೂ ಸದ್ದುಗದ್ದಲವಿಲ್ಲದೆ ಈ ಯೋಜನೆ ಜಾರಿ ಮಾಡಿತು.
ಪ್ರತ್ಯೇಕತಾವಾದಿಗಳ ಕೇಂದ್ರವಾಗಿರುವ ಬಾರಾಮುಲ್ಲಾ ಜಿಲ್ಲಾ ಕೇಂದ್ರದಿಂದ ಗಡಿ ಪ್ರದೇಶ ಉಡಿ ರಸ್ತೆಯಲ್ಲಿರುವ ‘ವೀರವನ’ದಲ್ಲಿ ಪಂಡಿತರಿಗಾಗಿ ಕಾಲೋನಿ ಗಳನ್ನು ನಿರ್ಮಾಣ ಮಾಡಿತು, ನೂರಕ್ಕೂ ಹೆಚ್ಚು ಪಂಡಿತರ ಕುಟುಂಬಗಳು ಅಲ್ಲಿ ಆಶ್ರಯ ಪಡೆದಿವೆ. ಪುಲ್ವಾಮ ಕುಪ್ವಾರ, ಕುಲ್ಗಾಂ ಮತ್ತು ಬಡಗಾಂ ಜಿಲ್ಲೆಗಳಲ್ಲೂ ಪಂಡಿತರಿಗೆ ಪ್ರತ್ಯೇಕ ಮನೆಗಳನ್ನು ನಿರ್ಮಿಸಿತು.

ಅಸಲಿಗೆ ಪಂಡಿತರಿಗೆ ಪ್ರತ್ಯೇಕವಾಗಿ ಗುಂಪು ಮನೆಗಳನ್ನು ನಿರ್ಮಿಸಿ ಪುನರ್ವಸತಿ ಕಲ್ಪಿಸಬೇಕೆಂಬುದು ಆರ್ ಎಸ್ ಎಸ್ ನಿಲುವು ಆದರೆ ಇದಕ್ಕೆ ತದ್ವಿರುದ್ಧವಾಗಿ ಗುಂಪು ಮನೆಗಳನ್ನು ನಿರ್ಮಾಣ ಮಾಡಕೂಡದು ಎಂಬ ಪ್ರಬಲ ವಿರೋಧ ಪ್ರತ್ಯೇಕವಾದಿಗಳದ್ದು ಪಂಡಿತರಿಗೂ ಗುಂಪು ಮನೆಗಳ ಬಗ್ಗೆ ಅಸಮಾಧಾನವಿದೆ.

ವಲಸೆ ಹೋದ ಕಾಶ್ಮೀರಿ ಪಂಡಿತರು ವಾಪಸ್ಸು ಬಂದು ನೆಲೆಸುವುದಕ್ಕೆ ಮುಸ್ಲಿಮರ ವಿರೋಧವಿಲ್ಲ. ಅವರುಗಳು ಅನೋನ್ಯವಾಗಿ ಇರಲು ಬಯಸುತ್ತಾರೆ, ಆದರೆ ವಿಪರ್ಯಾಸವೆಂದರೆ ಅಲ್ಲಿನ ರಾಜಕೀಯ ಮತ್ತು ಎರಡು ಕಡೆಗಳಲ್ಲಿ ಮತಾಂಧತೆಯಿಂದ ನರಳುತ್ತಿರುವ ವಿಷ ಜಂತುಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ.

ಬಿಜೆಪಿ ಸರ್ಕಾರದ ಧೋರಣೆಗಳಿಂದ ಕಾಶ್ಮೀರಿ ಪಂಡಿತರು ಸೇರಿದಂತೆ ಅಲ್ಲಿನ ಜನರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. 370 ನೇ ವಿಧಿಯನ್ನು ರದ್ದು ಪಡಿಸಿ ಇಡೀ ರಾಜ್ಯವನ್ನು ಜೈಲನ್ನಾಗಿಸಿ, ಸುಮಾರು ಹತ್ತಿರ ಎರಡು ವರ್ಷಗಳ ಕಾಲ ಬಂದೂಕಿನ ನಳಿಕೆಯ ಮೂಲಕ ಜನರನ್ನು ಕತ್ತಲಲ್ಲಿಟ್ಟು ತಾನು ಮಹಾ ಸಾಧನೆಯನ್ನು ಮಾಡಿದ್ದೇನೆ ಎಂದು ಇಡೀ ದೇಶಕ್ಕೆ ಜಗತ್ತಿಗೆ ಡಂಗುರ ಸಾರುತ್ತಾ ತನಗೆ ತಾನೆ ಬಹುಪರಾಕ್ ಹೇಳುತ್ತಾ ಅದರ ಲಾಭ ಪಡೆಯಲು ಹಗಲಿರುಳು ಎನ್ನದೆ ಶ್ರಮಿಸಿದೆ.

ಈಗ ಸಂಪೂರ್ಣ ಅಧಿಕಾರ ಬಿಜೆಪಿ ಕೈಯಲ್ಲೇ ಇದ್ದರೂ ಅನ್ಯಾಯಕೊಳಗಾದ ಕಾಶ್ಮೀರಿ ಪಂಡಿತರ ಬಗ್ಗೆ ಕಾಳಜಿ ತೋರದೆ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಮಾಡುತ್ತಾ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿ ಅವರ ಅತಂತ್ರ ಸ್ಥಿತಿಯನ್ನು ಜೀವಂತವಾಗಿಟ್ಟು ಅದು ತನ್ನ ಎಂದಿನ ಆತ್ಮವಂಚಕತವನ್ನು ಮುಂದುವರಿಸಿದೆ.

ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಕತ್ತಲಲ್ಲಿ ಕುಳಿತು ರದ್ದುಗೊಳಿಸುವ ಮುನ್ನ ಎಲ್ಲರೊಂದಿಗೂ ಸಮಾಲೋಚಿಸಿ ಮುಂದೆ ಹೆಜ್ಜೆ ಇಟ್ಟಿದ್ದರೆ ಕಾಶ್ಮೀರಕ್ಕೆ ಏನು ಮಾಡಬೇಕು ಏನು ಮಾಡಬಾರದು ಎಂದು ತೀರ್ಮಾನ ಮಾಡುವುದು ಸಾಧ್ಯವಾಗುತ್ತಿತ್ತು. ಬದಲಿಗೆ ಅದನ್ನು ದೊಡ್ಡ ಪ್ರಚಾರಕ್ಕೆ ಬಳಸಿಕೊಂಡು ಇದು ಮಹಾ ಸಾಧನೆ ಎಂದು ಬಿಂಬಿಸಿದ ಬಿಜೆಪಿಯು, ಕಾಶ್ಮೀರಿ ಪಂಡಿತರ ವಿಷಯದಲ್ಲಿ ಜಾಣ ಕುರುಡು ಪ್ರದರ್ಶಸಿಸಿತು.

370 ನೇ ವಿಧಿಯನ್ನು ರದ್ದುಪಡಿಸಿದಾಗ ದೇಶದ ಇತರ ಭಾಗಗಳ ಜನರು ಇಲ್ಲಿ ಬಂದು ನೆಲೆಸಬಹುದಾದ ವಾತಾವರಣ ನಿರ್ಮಾಣವಾಗಲಿದೆ, ಎಲ್ಲ ಕಾಶ್ಮೀರಿ ಪಂಡಿತರಿಗೂ ಪುನರ್ವಸತಿ ಕಲ್ಪಿಸುತ್ತೇವೆ, ಎಲ್ಲರಿಗೂ ಉದ್ಯೋಗ ಸೃಷ್ಟಿಸುತ್ತೇವೆ, ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಮಾಡಬಹುದು ಎಂದು ಬೊಗಳೆಬಿಟ್ಟಿದ್ದ ಬಿಜೆಪಿ ಕಳೆದ ಎರಡು ವರ್ಷಗಳಲ್ಲಿ ಮಾಡಿದ ಸಾಧನೆ ಶೂನ್ಯ.

ಹೌದು ಕೊರೊನಾ ಬಂದಿದ್ದರಿಂದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಅವರು ಸಬೂಬು ಹೇಳಬಹುದು ಆದರೆ ದೆಹಲಿಯ 20 ಸಾವಿರ ಕೋಟಿಯ ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್ ಗೆ ಕೊರೊನಾ ತೊಡಕಾಗಿಲ್ಲ ಎಂಬುವುದನ್ನು ದೇಶದ ಸೂಕ್ಷ್ಮ ಮನಸ್ಸುಗಳು ಗಮನಿಸುತ್ತಿವೆ.

ಅಲ್ಲಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಿ ಅವರನ್ನು ಧರ್ಮಾಂಧ ಶಕ್ತಿಗಳು ಭಯೋತ್ಪಾದನೆಗೆ ಬಳಸಿಕೊಳ್ಳದಂತೆ ರಕ್ಷಿಸಿ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವಾಗಲಿ ಅಲ್ಲಿನ ರಾಜಕೀಯ ಮುಖಂಡರಾಗಲಿ ಕಾಳಜಿ ತೋರುತ್ತಿಲ್ಲ ಹಾಗೇನಾದರೂ ಸಮಸ್ಯೆಗಳೇ ಬಗೆಹರಿದರೆ ಅವರೇ ನಿರುದ್ಯೋಗಿಗಳಾಗುವ ಭಯ ಅವರಿಗಿದೆಯೇನೋ..?

ಈಗ ಬಿಜೆಪಿಯ ಎಲ್ಲ ರೀತಿಯ ಪೊಳ್ಳು ಒಂದಲ್ಲ ಒಂದು ರೀತಿಯಲ್ಲಿ ಹೊರಬರಲು ಪ್ರಾರಂಭವಾಗಿದೆ, ಕಳೆದ ಗುರುವಾರ ಜೂನ್ 24ರಂದು ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸಿರುವುದು ಕಾಶ್ಮೀರದ ವಿಷಯದಲ್ಲಿ ತಮ್ಮ ತಪ್ಪು ನಿರ್ಧಾರದಿಂದ ಉಂಟಾದ ಬಿಕ್ಕಟ್ಟನ್ನು ಮರೆಮಾಚುವ ತಂತ್ರದ ಭಾಗವಾಗಿದೆ.

ಜೂನ್ 24ರಂದು ಕಾಶ್ಮೀರದ ಮುಖಂಡರ ಜೊತೆ ನಡೆದ ಸರ್ವಪಕ್ಷ ಸಭೆಯಲ್ಲಿ ಕಾಶ್ಮೀರಿ ಪಂಡಿತರ ಪುನರ್ವಸತಿಯ ಬಗ್ಗೆ ಮಾತುಕತೆ ನಡೆದಿಲ್ಲ, ಅಲ್ಲಿನ ಜನರು ಏನು ಬಯಸುತ್ತಾರೆ ಎಂಬ ಬಗ್ಗೆ ಚರ್ಚೆ ನಡೆದಿಲ್ಲ ಮುಂದೆ ರಾಜಕಾರಣ ಹೇಗೆ ಮಾಡಬೇಕು ಎಂಬ ಅಭಿಪ್ರಾಯಗಳಿಗಷ್ಟೆ ಸೀಮಿತವಾಗಿದೆ.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45