DISTRICT:
ದಾವಣಗೆರೆ: 2022-23 ನೇ ಸಾಲಿನ ದಾವಣಗೆರೆ ಮಹಾನಗರ ಪಾಲಿಕೆಯ ಆಯವ್ಯಯ ಮಂಡನೆಯಾಗಿದೆ. ಈ ಬಜೆಟ್ ನಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಈ ಆಯವ್ಯಯದಲ್ಲಿ ದಾವಣಗೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸದಾಗಿ ದೊಡ್ಡದಾದ ಯೋಜನೆಗಳಿಲ್ಲ. ಕಳೆದ ಎರಡು ವರ್ಷ ಮಂಡಿಸಿರುವ ಬಜೆಟ್ ನಲ್ಲಿದ್ದ ಹೆಚ್ಚಿನ ಯೋಜನೆಗಳನ್ನೇ ಮುಂದುವರಿಸಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನದ್ದೇನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ಬಜೆಟ್ ನ ಪ್ರಮುಖ ಅಂಶಗಳು
- ಮೂಲಭೂತ ಸೌಕರ್ಯ ಆಸ್ತಿಗಳ ನಿರ್ವಹಣೆ ಮತ್ತು ದುರಸ್ತಿ.
- ಹೊರಗುತ್ತಿಗೆ ವೆಚ್ಚಗಳು
- ಉಗ್ರಾಣ ಸಾಮಾಗ್ರಿಗಳ ಖರೀದಿ, ಸ್ಮಶಾನಗಳ ಅಭಿವೃದ್ದಿ
- ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು
- ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐ.ಎ.ಎಸ್/ಕೆ.ಎ.ಎಸ್ ಗೆ ಆಯ್ಕೆಯಾಗಲು ತರಬೇತಿ
- ಅನಗತ್ಯವಾಗಿ ನಿರ್ಮಿಸಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವುದು ಹಾಗೂ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾಮಗಾರಿ
- ನಗರ ಅರಣ್ಯೀಕರಣ ಹಾಗೂ ವಿಶ್ವ ಪರಿಸರ ದಿನಾಚರಣೆ
- ಮಳೆನೀರು ಮರುಪೂರಣ
- ರಾಜ್ಯ, ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ನಗರದ ಕ್ರೀಡಾಪಟುಗಳಿಗೆ ಪ್ರೋತ್ಸಾಹ
- ವಯೋ ವೃದ್ಧಾಶ್ರಮಗಳಿಗೆ ಪರಿಕರವನ್ನು ನೀಡುವುದು
- ಉದ್ಯಾನವನಗಳನ್ನು ನಿರ್ವಹಣೆ ಮಾಡಲು ಪರಿಕರಗಳ ಖರೀದಿ
- ಡಿಜಿಟಲ್ ಗ್ರಂಥಾಲಯ ನಿರ್ಮಾಣ
- ಪಾಲಿಕೆ ಒಡೆತನದಲ್ಲಿ ಬರುವ ನಿವೇಶನದಲ್ಲಿ ಒಂದು ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸುವುದು
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಯೋಜನೆ
- ಅಂಗವಿಕಲತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಪರಿಕರಗಳನ್ನು ನೀಡುವುದು
- ಪೌರ ಸನ್ಮಾನ ಕಾರ್ಯಕ್ರಮ
- ಇ-ತ್ಯಾಜ್ಯ ಸಂಗ್ರಹಣಾ ಘಟಕ
- ಯಾಂತ್ರೀಕೃತ ಕಸಗುಡಿಸುವ ಯಂತ್ರ ಮತ್ತು ರೋಡ್ ಬ್ರೇಕರ್ ಮಿಷನ್ಗಳ ಖರೀದಿ
- ಪಾರಂಪರಿಕ ತ್ಯಾಜ್ಯ ವಿಲೇವಾರಿ ಪಡಿಸುವಿಕೆ
- ಘನತ್ಯಾಜ್ಯ ವಿಲೇವಾರಿ ಮಾಡಲು ನಗರದ ನಾಲ್ಕು ದಿಕ್ಕಿನಲ್ಲಿಯೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ನಿವೇಶನ ಖರೀದಿಸುವುದು
- ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಹಾಜರಾತಿ ಸ್ಥಳಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣ
- ಮಹಾನಗರ ಪಾಲಿಕೆಯ ಸದಸ್ಯರುಗಳ ಜ್ಞಾನಾರ್ಜನೆಗಾಗಿ ಅಧ್ಯಯನ ಪ್ರವಾಸ
- ಮಹಾನಗರ ಪಾಲಿಕೆಗಳ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಕೂಟ ಆಯೋಜನೆ
- ಮೇಯರ್ ಕಪ್
- ಬೀದಿ ಬದಿ ವ್ಯಾಪಾರಸ್ಥರಿಗೆ ಕಲ್ಯಾಣ ನಿಧಿ ಸ್ಥಾಪನೆ
- ವಿಕಲಚೇತನ ಬಡ ವಿದ್ಯಾರ್ಥಿಗಳಿಗೆ ಸೋಲಾರ್ ದೀಪ ವಿತರಣೆ
- ನಗರ ವ್ಯಾಪ್ತಿಯ ಹಳೇ ಮರಗಳನ್ನು ವೈಜ್ಞಾನಿಕ ರೀತಿಯಲ್ಲಿ ತೆರವುಗೊಳಿಸುವುದು
- ಕೈಗಾರಿಕಾ ವಸಾಹಾತು ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ
- ಪ್ರತಿ ಉದ್ಯಾನವನಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ
- ಗರಡಿ ಮನೆ
- ದುಗ್ಗಮ್ಮನ ಬಾವಿಯನ್ನು ಅಭಿವೃದ್ಧಿ ಪಡಿಸುವುದು
- Sky Walk ನಿರ್ಮಾಣ
- ನಗರ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಮಹಾತ್ಮರ ಪ್ರತಿಮೆಗಳಿಗೆ ಸುಣ್ಣ-ಬಣ್ಣ ಸೇರಿದಂತೆ ವೃತ್ತಗಳ ನವೀಕರಣಕ್ಕಾಗಿ
- ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸ್ವಚ್ಛತಾ ಕಾರ್ಯಕ್ಕೆ ಪರಿಕರಗಳನ್ನು ವಿತರಿಸುವುದು
- ಕಸಾಯಿ ಖಾನೆ (Slaughter House) ನಿರ್ಮಾಣ
- ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾಮಗಾರಿ
- ಒಳಚರಂಡಿ ದುರಸ್ಥಿ ಹಾಗೂ ನಿರ್ಮಾಣಕ್ಕಾಗಿ
- ಕನ್ನಡ ಅನುಷ್ಠಾನಕ್ಕಾಗಿ ಕಾರ್ಯಕ್ರಮ
- ಸಮುದಾಯ ಭವನ ನಿರ್ಮಾಣ ಹಾಗೂ ನವೀಕರಣ ಕಾಮಗಾರಿ
- ಮಾನಸಿಕ ಅಸ್ವಸ್ಥತೆಯ ಬಗ್ಗೆ ಅರಿವು ಮೂಡಿಸುವುದು
- ಕಛೇರಿಯ ಹಳೇ ಕಡತಗಳನ್ನು ಸಂರಕ್ಷಿಸುವುದು
- ಜೀವ ವೈವಿದ್ಯ ನಿರ್ವಹಣಾ ಸಂರಕ್ಷಣಾ ಚಿಕಿತ್ಸಾ ಕೇಂದ್ರ ಸ್ಥಾಪನೆ
- ತಾರಸಿ ಉದ್ಯಾನವನ
- ಆಯುರ್ವೇದ ಥೀಮ್ ಪಾರ್ಕ್
- ಬೋನ್ಸಾಯ್ ಉದ್ಯಾನವನ
ಇನ್ನು ಈ ಬಾರಿಯ ಬಜೆಟ್ ನಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಿರುವುದು ವಿಶೇಷ.