DISTRICT:
ಚಿತ್ರದುರ್ಗ: ಚಿತ್ರದುರ್ಗಕ್ಕೆ ಬಂದಿರುವುದು ತವರುಮನೆಯಷ್ಟೆ ಸಂತಸ ನೀಡಿದೆ. ಜಿಲ್ಲೆಗೆ ಉತ್ತಮ ಭವಿಷ್ಯ ಕೊಡಲು ಸಾಧ್ಯವಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಚಿತ್ರದುರ್ಗ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ. ಚಿತ್ರದುರ್ಗ-ಗದಗ ಜಿಲ್ಲೆಗಳ ಉಸ್ತುವಾರಿ ಸಚಿವರನ್ನಾಗಿ ಸರ್ಕಾರ ಬಿ.ಸಿ.ಪಾಟೀಲ್ ಅವರನ್ನು ನೇಮಿಸಿದ್ದು,ಚಿತ್ರದುರ್ಗದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ಚಜಾರೋಹಣ ನೆರವೇರಿಸುವ ಮೂಲಕ ಉಸ್ತುವಾರಿ ಜವಾಬ್ದಾರಿಯನ್ನು ಬಿ.ಸಿ.ಪಾಟೀಲ್ ಹೊತ್ತುಕೊಂಡಿದ್ದಾರೆ.
ಹಿಂದೆ ಹಿರಿಯೂರು ಚಿತ್ರದುರ್ಗದಲ್ಲಿ 1985-94ರವರೆಗೆ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಚಿತ್ರದುರ್ಗ ಜಿಲ್ಲೆಯಿಂದಲೇ ಚಿತ್ರರಂಗ ಪ್ರವೇಶಿಸಿ ನಂತರ ರಾಜಕಾರಣಿಯಾದೆ. ಅನಿರೀಕ್ಷಿತವಾಗಿ ಚಿತ್ರದುರ್ಗ ಉಸ್ತುವಾರಿಯಾಗಿದ್ದು ಬಹಳ ಸಂತಸ ನೀಡಿದೆ ಎಂದರು.
ಸಿರಿಧಾನ್ಯ ಮೇಳ
2023ಕ್ಕೆ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗುತ್ತಿದೆ. ಕೋವಿಡ್ ಪರಿಸ್ಥಿರಿ ನೋಡಿಕೊಂಡು ಈ ವರ್ಷ ಏಪ್ರಿಲ್ ಅಥವಾ ಮೇ ನಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯ ಮೇಳವನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.