DISTRICT:
ಬಾಗಲಕೋಟೆ: ಪತಿ ಎರಡನೆ ಮದುವೆಯಾಗಿದ್ದು, ನನಗೆ ನ್ಯಾಯ ಕೊಡಿಸಿ ಎಂದು ದೂರು ನೀಡಲು ಹೋದ ಪತ್ನಿ ಹಾಗೂ ಸಂಬಂಧಿಕರ ಮೇಲೆ ಪೊಲೀಸರೇ ಹಲ್ಲೆ ನಡೆಸಿರುವ ಆರೋಪ ಬಾಗಲಕೋಟೆಯಲ್ಲಿ ಕೇಳಿಬಂದಿದೆ.
ಬಾಗಲಕೋಟೆಯ ಕಲಾದಗಿ ಪೊಲೀಸ್ ಠಾಣೆಗೆ ತುಳಸಿಗೇರಿ ಗ್ರಾಮದ ಪತ್ನಿ ಲಕ್ಷ್ಮೀಬಾಯಿ ಸಕಲಾದಗಿ ಹಾಗೂ ಸಹೋದರ, ಕುಟುಂಬಸ್ಥರು ಹೋಗಿದ್ದಾಗ ಈ ಘಟನೆಯಲ್ಲಿ ನಡೆದಿದ್ದು,ಇದೀಗ ನೊಂದ ಕುಟುಂಬಸ್ಥರು ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ.ಕಲಾದಗಿ ಪೊಲೀಸ್ ಠಾಣೆಯ ಪಿಎಸ್.ಐ ರವಿ ಪವಾರ್ ದರ್ಪಕ್ಕೆ ರೋಸಿಹೋದ ನೊಂದ ಕುಟುಂಬಸ್ಥರು ಎಸ್ಪಿ ಕಚೇರಿ ಬಳಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳಬೇಕು, ನಮಗೆ ನ್ಯಾಯ ಕೊಡಿಸಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ರಂಗಪ್ಪನ ಪತ್ನಿ ಲಕ್ಷ್ಮೀಬಾಯಿ, ಸಚೀನ್ ಗಿಡ್ಡಿ, ಶ್ರೀಕಾಂತ್ ಸಕಲಾದಗಿ ಎಂಬುವರ ಮೇಲೆ ಕಲಾದಗಿ ಪಿ.ಎಸ್.ಐ ರವಿ ಪವಾರ್ ಹಾಗೂ ಸಿಬ್ಬಂದಿಗಳು ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಸಚೀನ್ ಗಿಡ್ಡಿ, ಶ್ರೀಕಾಂತ್ ಸಕಲಾದಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಕಣ್ಣು, ತಲೆಯ ಭಾಗ, ಎದೆಗೆ ಬಲವಾಗಿ ಹಲ್ಲೆ ಮಾಡಿರುವುದರಿಂದ ಸಚಿನ್ ಹಾಗೂ ಶ್ರೀಕಾಂತ್ ಅಸ್ವಸ್ಥಗೊಂಡಿದ್ದಾರೆ.
ಪಿಎಸ್ಐ ಯಾವುದೋ ಒತ್ತಡಕ್ಕೊಳಗಾಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.ಲಕ್ಷ್ಮೀಬಾಯಿ ಹಾಗೂ ರಂಗಪ್ಪ ಮಧ್ಯೆ ಮದುವೆಯಾಗಿ 20 ವರ್ಷವಾಗಿದೆ. 15ವರ್ಷದ ಮಗಳಿದ್ರೂ ಮತ್ತೊಂದು ಮದುವೆಯಾಗಿದ್ದಾನೆ ಅಂತೆ.ನನ್ನ ದೂರು ದಾಖಲಿಸಿಕೊಂಡು ನ್ಯಾಯ ಕೊಡಿಸಿ ಎಂದು ಕೇಳಲು ಹೋದ ಮಹಿಳೆಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಾರೆ.ರಂಗಪ್ಪನ ಸಹೋದರಿ ಗಂಗವ್ವ ಹುಲ್ಲಾರ ಎರಡನೇ ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ರಂಗಪ್ಪ ಜೊತೆ ಪವಿತ್ರಾ ಎರಡನೇ ಮದುವೆಯಾಗಿದ್ದಾರೆ.ಎರಡನೇ ಮದುವೆಯಾಗಿರುವ ದಾಖಲೆ ತೆಗೆದುಕೊಂಡು ಹೋದ್ರೂ ಪಿಎಸ್ಐ ದೂರು ದಾಖಲಿಸಿಕೊಂಡಿಲ್ಲ. ಇನ್ನು ರಂಗಪ್ಪ ಹಾಗೂ ಲಕ್ಷ್ಮಿ ಸಂಸಾರಕ್ಕೆ ರಂಗಪ್ಪನ ಸಹೋದರಿ ಗಂಗವ್ವ ವಿಲನ್ ಆಗಿದ್ದಾಳೆ ಎಂದು ನೊಂದ ಪತ್ನಿ ಆರೋಪಿಸಿದ್ದಾಳೆ. ಪಿಎಸ್ಐ ರವಿ ಪವಾರ್, ಪೊಲೀಸ್ ಪೇದೆ ತೇರದಾಳ, ಶೆಟ್ಟರ್ ಎಂಬುವರಿಂದ ಹಲ್ಲೆಯಾಗಿದೆ.ನಮಗೆ ಪೊಲೀಸ್ ವರಿಷ್ಠಾಧಿಕಾರಿ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.