DISTRICT:
ಬಾಗಲಕೋಟೆ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಾಗಲಕೋಟೆಯ ಎನ್ ಎಸ್ ಯುಐ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಎನ್ ಎಸ್ ಯುಐ ಸಂಘಟನೆ ಬಾಗಲಕೋಟೆ ಜಿಲ್ಲಾಧ್ಯಕ್ಷ ವಿಜಯ್ ತಿಪ್ಪರೆಡ್ಡಿ ಮಾತನಾಡಿ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಈ ಸಾಲಿನ ಶೈಕ್ಷಣಿಕ ವರ್ಷದಿಂದ ಪದವಿ 4 ವರ್ಷ ಅವಧಿ ಮಾಡಲಾಗುವುದು ಎಂದಿದ್ದಾರೆ. ತರಾತುರಿಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದಾರೆ. ದೇಶದ ಬೇರೆ ರಾಜ್ಯಗಳಲ್ಲಿ ಇನ್ನೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿಲ್ಲ. ತಳ ಹಂತದ ಶಿಕ್ಷಣ ವ್ಯವಸ್ಥೆ,ಸರ್ಕಾರಿ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ, ಅಧ್ಯಾಪಕರ ನೇಮಕಾತಿ ಸೇರಿದಂತೆ ಸರ್ಕಾರಿ ಕಾಲೇಜು ಉನ್ನತೀಕರಣಗೊಳಿಸಿ,ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ತರಬೇಡಿ ಎಂದು ಆಗ್ರಹಿಸಿದರು.
ಇದು ಖಾಸಗಿ ಕಾಲೇಜುಗಳಿಗೆ ಅನುಕೂಲವಾಗಲಿದೆ ಎಂದು ವಿರೋಧಿಸುತ್ತೇವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬಡವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಶ್ರೀಮಂತ ವಿದ್ಯಾರ್ಥಿಗಳು,ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರವಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಯಲ್ಲಿ ಎನ್ ಎಸ್ ಯುಐ ಬೀಳಗಿ ತಾಲೂಕು ಅಧ್ಯಕ್ಷ ರಾಯಪ್ಪ ಕುಂಬಿ, ಬಾಗಲಕೋಟೆ ಗ್ರಾಮೀಣ ಅಧ್ಯಕ್ಷ ಅಭಿಷೇಕ್ ಮಾಚಾ ,ಮೈಬಿಬೂ ಬಾಂದಾರ.ಬೀರಪ್ಪ ಸಾಗನೂರು ಇದ್ದರು.