DISTRICT: ಬಾಗಲಕೋಟೆ: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ರಣಕೇಕೆ ಮುಂದುವರೆದಿದೆ. ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಅಟ್ಯಾಕ್ ಆಗುತ್ತೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಎರಡನೇ ಅಲೆಯೂ ಮಕ್ಕಳಿಗೂ ವಕ್ಕರಿಸಿ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 2062 ಮಕ್ಕಳಿಗೆ ಸೋಂಕು ಪತ್ತೆಯಾಗಿದ್ದು, ಅದರಲ್ಲಿ 10 ವರ್ಷದೊಳಗಿನ 694 ಮಕ್ಕಳಿಗೆ ಸೋಂಕು ದೃಢವಾಗಿದರೆ, 11 ರಿಂದ 18 ವರ್ಷದ 1368 ಮಕ್ಕಳಲ್ಲಿ ಕೋವಿಡ್ ದೃಢವಾಗುವ ಮೂಲಕ ಬಾಗಲಕೋಟೆ ಜಿಲ್ಲೆಯ ಜನರಲ್ಲಿ ಭಯ ಹುಟ್ಟಿಸಿದೆ. ಕೋವಿಡ್ ಸೋಂಕು ತಗುಲಿದ 1 ರಿಂದ 10 ವಯಸ್ಸಿನ 318 ಮಕ್ಕಳು ಗುಣಮುಖರಾಗಿದರೆ, 11ರಿಂದ 18 ವಯಸ್ಸಿನ 673 ಮಕ್ಕಳು ಗುಣಮುಖರಾಗಿದ್ದಾರೆ. ಅಲ್ಲದೇ ಮೊದಲನೇಯ ಅಲೆಯಲ್ಲೂ ಜಿಲ್ಲೆಯ ಒಟ್ಟು 1160 ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು, ಆದ್ರೆ ೨ನೇ ಅಲೆಯಲ್ಲಿ ಎರಡು ಸೋಂಕಿತ ಮಕ್ಕಳ ಸಂಖ್ಯೆ ಎರಡು ಸಾವಿರ ದಾಟಿದ್ದುರ ಜಿಲ್ಲಾಡಳಿತಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. 3ನೇ ಅಲೆ ಮಕ್ಕಳಿಗೆ ಮಾರಕ ಎನ್ನುವ ಹಿನ್ನೆಯಲ್ಲಿ, ಬಾಗಲಕೋಟೆ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ದತೆ ಮಾಡಿಕೊಳ್ಳಲಿಕ್ಕೆ ಮುಂದಾಗಿದೆ. ಈ ಕುರಿತಾಗಿ ಈಗಾಗಲೇ ಮೂರು ಬಾರಿ ಸಭೆಗಳಾಗಿದ್ದು, ಜಿಲ್ಲೆಯ ವಿವಿಧ ಚಿಕ್ಕಮಕ್ಕಳ ತಜ್ಞ ವೈದ್ಯರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಅನಂತ್ ದೇಸಾಯಿ ಮಾಹಿತಿ ನೀಡಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 20 ಐಸಿಯು ಬೆಡ್ ಮೀಸಲಿಡುತ್ತೇವೆ, ಕುಮಾರೇಶ್ವರ ಖಾಸಗಿ ಆಸ್ಪತ್ರೆಯಲ್ಲೂ ಐಸಿಯು ಬೆಡ್ ಸೇರಿದಂತೆ ಆಕ್ಸಿಜನ್ ಬೆಡ್ ಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಕ್ಕಳಿಗಾಗಿ ಮೊದಲ ಹಂತದಲ್ಲಿ ಜಿಲ್ಲಾದ್ಯಂತ ಒಟ್ಟು 200 ಬೆಡ್ ಮೀಸಲಿಡಾಗಿದ್ದು, ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಇನ್ನು ಮೂರನೆ ಅಲೆಗೆ ಬೇಕಾಗುವ ಔಷಧಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ, ತಾಲೂಕಾಸ್ಪತ್ರೆ, ತಾಲೂಕಾವಾರು ಖಾಸಗಿ ಆಸ್ಪತ್ರೆಗಳಲ್ಲೂ ಮಕ್ಕಳಿಗೆ ಚಿಕಿತ್ಸೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. [video width="640" height="352" mp4="http://24x7livekannada.com/wp-content/uploads/2021/05/baby.mp4"][/video]