DISTRICT:
ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಮೋಡ ಮುಸುಕಿದ ವಾತಾವರಣದ ನಡುವೆಯೂ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದಿಂದ ಮಂಗಳವಾರ ಬೆಳಗ್ಗೆ ಚಳ್ಳಕೆರೆಯತ್ತ ಹೊರಟಿದೆ.
ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ಮಾಜಿ ಸಚಿವ ರಮನಾಥ್ ರೈ, ಮಾಜಿ ಸಂಸದ ಚಂದ್ರಪ್ಪ, ಡಿ.ಸುಧಾಕರ್, ಟಿ.ರಘುಮೂರ್ತಿ ಸೇರಿಂದತೆ ಹಲವರು ಸಾಥ್ ನೀಡಿದ್ದಾರೆ.
ನಿನ್ನೆ ರಾತ್ರಿಯಿಡಿ ಆಗಾಗ್ಗೆ ಮಳೆ ಸುರಿಯುತ್ತಲೇ ಇತ್ತು. ಬೆಳಗ್ಗೆ ಮಳೆ ಬಿಡುವು ಕೊಟ್ಟಿದ್ದು, ಪಾದಯಾತ್ರೆ ಬಿರುಸು ಪಡೆದಿದೆ. ಹರ್ತಿಕೋಟೆಯಿಂದ ಸಾಣಿಕೆರೆ ಗ್ರಾಮಕ್ಕೆ ತಲುಪಲಿರುವ ಪಾದಯಾತ್ರೆಯು, ಸಂಜೆ 4ಕ್ಕೆ ಮತ್ತೆ ಆರಂಭವಾಗಿ ಚಳ್ಳಕೆರೆ ತಲುಪಲಿದೆ. ಇನ್ನು ರಾಹುಲ್ ಗಾಂಧಿ ಅವರನ್ನ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನರು ತಮ್ಮ ದಾರಿಯಲ್ಲಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ.
ಸತತ ಮೂರು ದಿನ ತುಮಕೂರಿನಲ್ಲಿ ಮುನ್ನಡೆದ 'ಭಾರತ್ ಜೋಡೋ ಯಾತ್ರೆ' ಸೋಮವಾರ ಕೋಟೆ ನಾಡು ಚಿತ್ರದುರ್ಗಕ್ಕೆ ಆಗಮಿಸಿದೆ. ಹರ್ತಿಕೋಟೆ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಮೈದಾನದಲ್ಲಿ ಸೊಮವಾರ ರಾತ್ರಿ ರಾಹುಲ್ ತಂಗಿದ್ದರು.