DISTRICT:
ಚಿಕ್ಕಮಗಳೂರು: ಕುರಿಗಾಹಿ ಮೀಸಲು ಪ್ರದೇಶವನ್ನು ಒತ್ತುವರಿ ಮಾಡಿರುವ ಭೂಗಳ್ಳರಿಂದ ಬಿಡಿಸಿಕೊಡಬೇಕೆಂದು ಆಗ್ರಹಿಸಿ ಕುರುಬ ಸಮಾಜ ಮತ್ತು ಕುರಿಗಾಹಿಗಳ ಹಿತರಕ್ಷಣಾ ವೇದಿಕೆಯಿಂದ ಕಡೂರಲ್ಲಿ ಪ್ರತಿಭಟನೆ ನಡೆಯಿತು.
ಕಡೂರು ತಾಲೂಕಿನ ಎಮ್ಮೆದೊಡ್ಡಿಯಲ್ಲಿ ಕುರಿಗಾಹಿ ಮೀಸಲು ಜಾಗ ಒತ್ತುವರಿಯಾಗಿದ್ದು, ಈಗಾಗಲೇ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಒತ್ತುವರಿ ತೆರವು ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ರಾಜಕೀಯ ನಾಟಕದ ಬೆಳವಣಿಗೆಗಳು ನಡೆದು ಒತ್ತುವರಿ ತೆರವುಗೊಳಿಸದೆ ಭೂಗಳ್ಳರನ್ನು ರಕ್ಷಿಸಲಾಗುತ್ತಿದೆ. ಭೂಗಳ್ಳರ ವಿರುದ್ಧ ನಾವು ಹೋರಾಡುತ್ತಿದ್ದೇವೆ ಹೊರತು ಯಾವುದೇ ಸಮಾಜದ ವಿರುದ್ಧವಲ್ಲ. ಈ ಪ್ರದೇಶವನ್ನು ತಕ್ಷಣ ಕುರಿಗಾಹಿಗಳಿಗೆ ಉಳಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕುರುಬ ಸಮಾಜದ ಅಧ್ಯಕ್ಷ ಕೆ ಎಚ್ ಪ್ರಸನ್ನ, ಕೆಪಿಸಿಸಿ ಸದಸ್ಯ ಕೆ ಎಸ್ ಆನಂದ್ ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಶರತ್ ಕೃಷ್ಣಮೂರ್ತಿ, ಕರಿಬಡ್ಡೆ ಶ್ರೀನಿವಾಸ್, ರೇಖಾ ಹುಲಿಯಪ್ಪಗೌಡ, ಕೆ ಎಂ ಕೆಂಪರಾಜು, ಕೋಡಿಹಳ್ಳಿ ಮಹೇಶ್ವರಪ್ಪ ವನನಾಲ ದೇವರಾಜ್ ಇದ್ದರು.