DISTRICT:
ಧಾರವಾಡ: ಮತಾಂತರ ನಿಷೇಧ ಕಾಯ್ದೆ ಕೈ ಬಿಡಲು ಆಗ್ರಹಿಸಿ ಹಾಗೂ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ, ಹುಬ್ಬಳ್ಳಿಯಲ್ಲಿ ಕ್ರೈಸ್ತ ಮುಖಂಡರು ಹಾಗೂ ಯುನೈಟೆಡ್ ಧಾರವಾಡ ಜಿಲ್ಲಾ ಕ್ರೈಸ್ತ ಸಭಾ ಪಾಲಕರು ಮತ್ತು ನಾಯಕರ ಒಕ್ಕೂಟದಿಂದ ಪ್ರತಿಭಟನಾ ಮೇರವಣಿಗೆ ನಡೆಸಲಾಯಿತು.
ಹುಬ್ಬಳ್ಳಿ ನಗರದ ಗದಗ ರಸ್ತೆಯ ಸೇಂಟ್ ಪೀಟರ್ಸ್ ಚರ್ಚ್‌ನಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಗದಗ ರಸ್ತೆಯ ಮೂಲಕ ಸರ್ ಸಿದ್ದಪ್ಪ ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ಚೆನ್ನಮ್ಮ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ಬಂದು ತಲುಪಿತು. ಪ್ರತಿಭಟನಾ ಮೆರವಣಿಯಿದ್ದಕ್ಕೂ ಶಾಂತಿಯುವಾಗಿ ಮೌನ ಪ್ರತಿಭಟನೆ ಮಾಡುವ ಮೂಲಕ ಹಾಗೂ ಕೈಗೆ ಕಪ್ಪು ಬಟ್ಟೆ, ಕಪ್ಪು ಮಾಸ್ಕ್ ಧರಿಸುವುದರ ಮೂಲಕ ರಾಜ್ಯ ಸರ್ಕಾರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕ್ರೈಸ್ತ ಸಮೂದಾಯದ ಮೇಲೆ ಇತ್ತಿಚೆಗೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ. ಆದರೆ ಸ್ವಯಂ ಪ್ರೇರಿತವಾಗಿ ಬೇರೆ ಧರ್ಮ ಸ್ವೀಕಾರಕ್ಕೆ ಸಂವಿಧಾನದಲ್ಲಿಯೇ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ತರುತ್ತಿರುವುದು ಸಂವಿಧಾನ ವಿರುದ್ಧವಾಗಿದೆ. ಧರ್ಮ ಆಚರಣೆ ಮಾಡುವುದು ಸಂವಿಧಾನಿಕ ಹಕ್ಕು. ಧರ್ಮದಿಂದ ಧರ್ಮಕ್ಕೆ ಮತಾಂತರ ಹೊಂದುವುದು ಅವರವರ ಹಕ್ಕು, ಆದರೆ ಶಾಸಕ ಗೂಳಿಹಟ್ಟಿ ಶೇಖರ ಸೇರಿದಂತೆ ಇನ್ನಿತರರು ಸಮಾಜದ ವಿರುದ್ದವಾಗಿ ಮಾತನಾಡುವ ಮೂಲಕ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಅಸಮಧಾನ ಹೊರ ಹಾಕಿದರು.
ಕ್ರೈಸ್ತರು ಮತಾಂತರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಅವರ ಹೇಳಿಕೆಯಿಂದ ರಾಜ್ಯದಲ್ಲಿ ಸಮೂದಾಯದ ಮೇಲೆ ಹಲ್ಲೆ, ದಾಳಿ ಹಚ್ಚಾಗುತ್ತಿವೆ. ಇದಕ್ಕೆ ಯಾರು ಹೊಣೆ. ಇನ್ನು ಕ್ರೈಸ್ತರ ಮೇಲಿನ ಹಲ್ಲೇ ಕುರಿತು ಪ್ರಕರಣ ದಾಖಲಾದರೂ ಅಂತರವನ್ನು ಈವರೆಗೆ ಏಕೆ ಬಂಧಿಸಿಲ್ಲ ಪ್ರಶ್ನೆ ಮಾಡಿದರು. ಕೂಡಲೇ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಜೊತೆಗೆ ಕ್ರೈಸ್ತ ಸಮೂದಾಯದ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.