DISTRICT: ಕುಶಾಲನಗರ: ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ ನಿರಾಶ್ರಿತರು ಹಾಗೂ ವಲಸೆ ಕಾರ್ಮಿಕರು ಊಟ ಇಲ್ಲದೆ ಪರದಾಡುತ್ತಿರುವುದನ್ನು ಮನಗಂಡು ಭೀಮ ಘರ್ಜನೆ ಸಂಘಟನೆ ಪಟ್ಟಣದ ವಿವಿಧ ಭಾಗಗಳಲ್ಲಿ ಇದ್ದ ನಿರಾಶ್ರಿತರಿಗೆ ವಲಸೆ ಕಾರ್ಮಿಕರಿಗೆ ಭೀಮ ಘರ್ಜನೆ ಜಿಲ್ಲಾಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ಊಟ ಹಾಗೂ ನೀರಿನ ಬಾಟಲನ್ನು ವಿತರಿಸಿದರು. ಈ ಸಂದರ್ಭ ಮಾತನಾಡಿದ ಭೀಮ ಘರ್ಜನೆ ಸಂಘಟನೆ ತಾಲೂಕು ಉಪಾಧ್ಯಕ್ಷ ಗಣೇಶ್ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಭಿಕ್ಷುಕರು ವಲಸೆ ಕಾರ್ಮಿಕರು ಹಸಿವಿನಿಂದ ಬಳಲುತ್ತಿದ್ದು ಅವರಿಗೆ ನಮ್ಮ ಸಂಘಟನೆ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ ಕಳೆದ ಒಂದು ವಾರದಿಂದ ಪಟ್ಟಣದ ವಿವಿಧ ಭಾಗಗಳಲ್ಲಿ ನೆಲೆಸಿದ ಕಾರ್ಮಿಕರಿಗೆ ಭಿಕ್ಷುಕರಿಗೆ ನಿರಾಶ್ರಿತರಿಗೆ ಆಹಾರವನ್ನು ಪೂರೈಸಿದ್ದೇವೆ ಪಟ್ಟಣದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಇಂತಹ ಸಂದರ್ಭದಲ್ಲಿ ಬಡವರ ಪರ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಭೀಮ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ನಾಗರಾಜ .ಪದಾಧಿಕಾರಿಗಳಾದ ಸುರೇಶ್. ಕುಮಾರ್. ರಾಜಣ್ಣ ಮುಂತಾದವರು ಹಾಜರಿದ್ದರು