DISTRICT: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ನೂರಾರು ಪತ್ರ ಕರ್ತರಿಗೆ ಆಹಾರ ಕಿಟ್‌ಗಳನ್ನು ಹಾಗೂ ನಿಪ್ಪಾಣಿ ಪಾಲಿಕೆಗೆ 2 ಆಮ್ಲಜನಕ ಸಾಂದ್ರಕ ಯಂತ್ರ ಗಳನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಅರಿಹಂತ ಉದ್ಯೋಗ ಸಮೂಹ ದಿಂದ ಯುವ ಮುಖಂಡ ಉತ್ತಮ ಪಾಟೀಲ ನಗರ ಪಾಲಿಕೆಗೆ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಉತ್ತಮ ಪಾಟೀಲ್ 2ವರ್ಷ ಗಳಿಂದ ಕೊರೊನಾ ಮಹಾಮಾರಿ ಯಿಂದ ಜನರು ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ, ಮಾನಸಿಕ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದಾರೆ ಸಾರ್ವಜನಿಕರ ಸೇವೆಗೆ ತಮ್ಮ ಪ್ರಾಣ, ಕುಟುಂಬದ ಹಂಗು ತೊರೆದು ರಾತ್ರಿ ಹಗಲು ಶ್ರಮಿಸುತ್ತಿರುವ ಆಶಾ, ಅಂಗನವಾಡಿ, ವೈದ್ಯಕೀಯ, ಕಂದಾಯ, ಪೊಲೀಸ, ಪೌರ, ಪತ್ರಕರ್ತರು, ಗ್ರಾಮ ಪಂಚಾ ಯತ ಸೇರಿದಂತೆ ಆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಈಗಾಗಲೇ ಉಚಿತವಾಗಿ ಆಹಾರ ಧಾನ್ಯಗಳ ಕಿಟ್,ವಿತರಿಸಿದ್ದೇವೆ ಅದರಲ್ಲಿ ಪತ್ರಕರ್ತರಿಗೆ ಸರ್ಕಾರ ಯಾವುದೇ ಆರ್ಥಿಕ ನೆರವು ನೀಡಿಲ್ಲ ವಯಕ್ತಿಕ ವಾಗಿ ಯಾವುದೇ ಆರ್ಥಿಕ ಸಮಸ್ಯ ಇದ್ದರೆ ನಾವೂ ಸಹಾಯ ಮಾಡುತ್ತೇನೆ ಕಷ್ಟದಲ್ಲಿರುವರಿಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ದ ಎಂದು ಉತ್ತಮ ಪಾಟೀಲ ಹೇಳಿದರು ನಿಪ್ಪಾಣಿ ಭಾಗದಲ್ಲಿ ಕಷ್ಟದಲ್ಲಿ ರುವ ಎಲ್ಲಾ ಬಡ ಜನರಿಗೆ ನೆರವು ನೀಡಲು ಅರಿಹಂತ ಉದ್ಯೋಗ ಸಮೂಹ ಸದಾ ನಿಮ್ಮ ಜೊತೆ ಇದೆ ಹಾಗೂ ರಾಜ್ಯ, ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಿ ಸುವಲ್ಲಿ ಯಾವುದೇ ತಯಾರಿ ಮಾಡಿಲ್ಲ ಸಂಪೂರ್ಣವಾಗಿ ವಿಫಲವಾಗಿವೆ ಆದ್ದರಿಂದ ಕಾಂಗ್ರೆಸ್ ಬಡವರ ಸಂಕಷ್ಟಕ್ಕೆ ಜೊತೆಗೆ ನಿಲ್ಲಲ್ಲಿದೆ ಎಂದರು. ಈ ಸಂಧರ್ಭದಲ್ಲಿ ಕಾಂಗ್ರೇಸ್ ಮುಖಂಡ ಉತ್ತಮ ಪಾಟೀಲ ,ಬಾಳಾಸಾಹೇಬ ದೇಸಾಯಿ ಸರ್ಕಾರ, ಸುನಿಲ ಪಾಟೀಲ, ಸಂಜಯ ಸಾಂಗಾವಕರ, ದಿಲೀಪ ಪಠಾಡೆ, ದೀಪಕ ಸಾವಂತ,ಶಿರೀಶ ಕಮತೆ, ಇಮ್ರಾನ್ ಮಕಾನದಾ ರ, ಕುಮಾರ ಗೋರ್ವಾಡೆ, ರಮೀಜ್ ಮಕಾಂದಾರ, ವಿಲಾಸ ಗಾಡಿವಡ್ಡರ ಹಾಜರಿದ್ದರು. [video width="640" height="480" mp4="http://24x7livekannada.com/wp-content/uploads/2021/06/belg.mp4"][/video]