DISTRICT: ಕಾರವಾರ : ಭಟ್ಕಳದಲ್ಲಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಆಡಳಿತದೊಂದಿಗೆ ಕೈಜೋಡಿಸಬೇಕು ಹಾಗೂ ಪ್ರತಿಯೊಬ್ಬ ರೂ ಕೊರೋನಾವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು ಅಂದಾಗ ಮಾತ್ರ ಕೊರೋನಾ ಮಹಾಮಾರಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ಹೇಳಿದರು. ಅವರು ಶನಿವಾರ ತಾಲೂಕಾ ಡಳಿತಕ್ಕೆ ಆರೋಗ್ಯ ಕಿಟ್ ಗಳನ್ನು ಹಸ್ತಾಂತರಿಸಿ ಮಾತನಾಡಿದರು.ಕೊರೋನಾ ಬಗ್ಗೆ ನಾವು ಒಗ್ಗಟ್ಟಿನಿಂದ ಹೋರಾಟವನ್ನು ನಡೆಸಬೇಕಾಗಿದೆ.ಈ ಸಂದರ್ಭ ದಲ್ಲಿ ನಾನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚನೆಯಂತೆ ಈ ಆರೋಗ್ಯ ಕಿಟ್ ಅನ್ನು ಉತ್ತರಕನ್ನಡದಾದ್ಯಂತ ಪ್ರತಿಯೊಂದು ತಾಲೂಕಾಡಳಿತ ಕ್ಕೆ ನೀಡುತ್ತಿದ್ದೇನೆ.ಇದೊಂದು ಕೊರೋನಾ ಸಮಯದಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಕಿರು ಸೇವೆಯಾಗಿದೆ ಎಂದು ದೇಶಪಾಂಡೆ ಅವರು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಮಾತನಾಡಿ,ಆರ್.ವಿ. ದೇಶಪಾಂಡೆಯವರು ಈ ಹಿಂದೆಯೂ ಕೂಡ ತಾಲೂಕು ಆಸ್ಪತ್ರೆಗೆ,ಕೊರೋನಾ ರೋಗಿಗಳಿಗೆ ಅವಶ್ಯಕತೆ ಇರುವ ಆರೋಗ್ಯ ಕಿಟ್ ಗಳನ್ನು ನೀಡಿದ್ದರು.ಇಂದು ಅವರು ತಾವೇ ಖುದ್ದಾಗಿ ಬಂದು ತಾಲೂಕಾಡಳಿತಕ್ಕೆ ಆರೋಗ್ಯ ಕಿಟ್‌ಗಳನ್ನು ಹಸ್ತಾಂತರಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಯೂ ಕೂಡ ಕೊರೋನಾ ರೋಗಿಗಳಿಗೆ ಯಾವುದೇ ಅವಶ್ಯಕ ವಸ್ತುಗಳಿದ್ದರೂ ತಾವು ಒದಗಿಸುವ ಭರವಸೆಯನ್ನು ಅವರು ನೀಡಿದ್ದಾರೆ.ಇದು ಅವರ ಸಮಾಜಮುಖಿ ಕಾರ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.