DISTRICT: ವರದಿ: ಮಂಜುನಾಥ ಡಿ ಧಾರವಾಡ: ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರವನ್ನು ಹೊಂದಿದ್ದು, ಅದರಲ್ಲಿ ಎರಡು ಸ್ಥಾನ ಹೊರತು ಪಡಿಸಿ ಉಳಿದೆಲ್ಲಾ ಕಡೆ ಬಿಜೆಪಿಯ ಶಾಸಕರೇ ಗೆದ್ದು ಬಂದಿದ್ದಾರೆ. ಆದರೆ ಈಗ ರಾಜ್ಯ ಬಿಜೆಪಿಯಲ್ಲಿ ಪ್ರತಿ ದಿನವೂ ಒಂದಿಲ್ಲ ಒಂದು ವದಂತಿ ಹಬ್ಬುತ್ತಿದ್ದು, ಅದು ಈಗ ಧಾರವಾಡ ಜಿಲ್ಲೆಯವರೆಗೂ ಬಂದು ನಿಂತಿದೆ. ಈ ಹಿಂದೆಯಿಂದಲ್ಲೂ ರಾಜ್ಯ ಬಿಜೆಪಿಯಲ್ಲಿ ಎಂತಹದೇ ಬೆಳವಣಿಗೆ ನಡೆದರೂ ಕೂಡ, ಧಾರವಾಡ ಬಿಜೆಪಿಗ ಶಾಸಕರು ಯಾವುದೇ ಥರದ ಮಾತಿಗೆ ಅವಕಾಶವನ್ನು ನೀಡಿರಲಿಲ್ಲ. ಆದರೆ, ಇದೀಗ ಧಾರವಾಡ ಜಿಲ್ಲೆಯ ಬಿಜೆಪಿಯ ಹಕ್ಕ-ಬುಕ್ಕ ಖ್ಯಾತಿ ಹೊಂದಿರುವ, ಪಕ್ಷದ ಕೇಂದ್ರ ಮಂತ್ರಿ ಹಾಗೂ ರಾಜ್ಯದ ಸಚಿವರನ್ನ ಮೀರಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ನಡೆದುಕೊಳ್ಳಲು ಮುಂದಾದ್ರಾ ಎಂಬ ಮಾತುಗಳು, ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬರತೊಡಗಿವೆ. ಈ ಹಿಂದೆ ಮಾಜಿ ಸಿಎಂ ಹಾಲಿ ಸಚಿವರಾದ ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ, ಅವಳಿನಗರ ನಡುವೆ ತ್ವರೀತ ಸಂಚಾರ ಸೇವೆಯ, ಬಿಆರ್‌ಟಿಎಸ್ ಯೋಜನೆಯನ್ನು ಜಾರಿಗೆ ತಂದಿದ್ದರು, ಅದರ ಕಾಮಗಾರಿ ಕೂಡಾ ಪೂರ್ಣಗೊಂಡು, ಈಗ ಬಿಅರ್‌ಟಿಎಸ್ ಚಿಗರಿ ಬಸ್‌ಗಳು ಸಂಚಾರ ನಡೆಸುತ್ತಿವೆ. ಆದರೆ ಈ ಯೋಜನೆಯನ್ನು ಶಾಸಕ ಅರವಿಂದ ಬೆಲ್ಲದವರು ವಿರೋಧಿಸುತ್ತಲೇ ಬಂದಿದ್ದಾರೆ. ಕಾಮಗಾರಿ ಅವೈಜ್ಞಾನಿಕವಾಗಿದೆ ಇದರಲ್ಲಿ ಹಲವು ಲೋಪದೋಷಗಳಿವೆ ಎಂದು ಹೇಳುತ್ತಾ ವಿರೋಧ ವ್ಯಕ್ತಪಡಿಸುತ್ತಲೆ ಬಂದಿದ್ದರು. ಹೀಗೆ ಈಗ ಮುಂದುವರೆದ ಭಾಗವಾಗಿ ರಾಜ್ಯ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಶಾಸಕ ಅರವಿಂದ ಬೆಲ್ಲದ ಹೆಸರು ಕೂಡಾ ಕೇಳಿ ಬರುತ್ತಿದ್ದು, ಜಿಲ್ಲೆಯ ಹಿರಿಯ ಬಿಜೆಪಿಗರನ್ನು ಮೀರಿ ಅರವಿಂದ ಬೆಲ್ಲದ ನಿಲ್ಲೋಕೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ಹಾಲಿ ಸಚಿವರಾಗಿರುವ ಜಗದೀಶ್ ಶೆಟ್ಟರ ಹಾಗೂ ಕೇಂದ್ರ ಸಚಿವರಾಗಿರುವ ಪ್ರಹ್ಲಾದ ಜೋಶಿಯವರಿಗೆ ಗೊತ್ತಿಲ್ಲದೇ, ಶಾಸಕ ಅರವಿಂದ ಬೆಲ್ಲದ ದೆಹಲಿ ಪ್ರಯಾಣ, ಬಿಜೆಪಿ ಹೈಕಮಾಂಡ್ ಮೀಟ್ ಮಾಡುವ ಮೂಲಕ ರಾಜಕಾರಣಕ್ಕೆ ಮುಂದಾಗಿರುವುದು ಕೂಡಾ ಮತ್ತಷ್ಟು ಈಗ, ಹಕ್ಕ-ಬಕ್ಕರನ್ನು ಮೀರಿ ನಿಲ್ಲೋಕ್ಕೆ ಶಾಸಕರ ಅರವಿಂದ ಬೆಲ್ಲದ ಮುಂದಾಗಿದ್ದಾರೆ ಎಂಬ ಮಾತ್ತಿಗೆ ಮತಷ್ಡು ಪುಷ್ಠಿ ನೀಡುತ್ತಿದೆ. ಅಲ್ಲದೆ ಸದ್ಯ ರಾಜಕಾರಣದಲ್ಲಿ ಏನಾದರೂ ನಡೆಯಬಹುದು ಎಂದು ಹೇಳಲಾಗುತ್ತಿದೆ ಆದರೂ, ಧಾರವಾಡ ಜಿಲ್ಲೆಯಲ್ಲಿ ಶೆಟ್ಟರ-ಜೋಶಿ ಹೊರತುಪಡಿಸಿ, ಮತ್ತೊಬ್ಬ ಶಾಸಕರು ಈಗ ‘ದಿಲ್ಲಿ ರಾಜಕೀಯ’ ನಂಟು ಆರಂಭಿಸಿರುವದು ಮಾತ್ರ ಸುಳ್ಳಲ್ಲ. ಶಾಸಕ ಅರವಿಂದ ಬೆಲ್ಲದ ಅವರ ಸದ್ಯದ ನಡೆ, ಧಾರವಾಡ ರಾಜಕೀಯದಲ್ಲಿ ಹಲವು ಮಾತುಗಳನ್ನು, ಚರ್ಚೆಗಳನ್ನು ಹುಟ್ಟುಹಾಕಿದ್ದು, ಬೆಲ್ಲದ ಅವರ ನಡೆ ಹಿಂದೆ ಜಿಲ್ಲೆಯ ಬಿಜೆಪಿ ಹಕ್ಕ-ಬುಕ್ಕ ಖ್ಯಾತಿಯ ಶೆಟ್ಟರ-ಜೋಶಿಯವರು ಇರಬಹುದು. ಇಲ್ಲವೇ ಕಳೆದ ಹಲವು ದಶಕಗಳಿಂದ ಬೆಲ್ಲದ ಕುಟುಂಬಕ್ಕೆ ಸಿಗದ ಸಚಿವ ಸ್ಥಾನ ಪಡೆದುಕೊಳ್ಳುವುದಕ್ಕೆ ಬೆಲ್ಲದ ಮುಂದಾಗಿರಬೇಕು ಎಂಬ ಮಾತುಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.