DISTRICT:
ಬೆಂಗಳೂರು : ರಾಜ್ಯದ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ನವೀನ್ ಅವರ ಅಗಲಿಕೆ ಕುರಿತು ಉಕ್ರೇನ್ನಲ್ಲಿರುವ ಸ್ನೇಹಿತರು ಕೂಡ ಕಣ್ಣೀರು ಹಾಕಿದ್ದಾರೆ.
ಕಾರ್ಕೀವ್‌ನಲ್ಲಿ ನನಗೆ ಜಾಕೆಟ್ ಎಲ್ಲ ಕೊಟ್ಟು ನನ್ನ ಪ್ರಾಣ ಉಳಿಸಿದ್ದು ನವೀನ್. ಆದರೆ, ಇಂದು ಅವನು ನಮ್ಮ ಬಿಟ್ಟು ಹೋದ ಎಂದು ನವೀನ್ ಸ್ನೇಹಿತ ಯಶ್ವಂತ್ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ನವೀನ್ ಅವರು ಊಟ ತರಲು ಹೊರಗೆ ಹೋದಾಗ ಈ ದುರ್ಘಟನೆ ನಡೆದಿದೆ ಎಂದು ಘಟನೆ ವಿವರಿಸಿದರು.
ಶೇಖರ ಗೌಡ ಅವರ ಎರಡನೇ ಮಗ ನವೀನ್ ಕಳೆದ ಮೂರು ವರ್ಷಗಳಿಂದ ಉಕ್ರೇನ್ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಅಷ್ಟೇ ಊರಿಗೆ ಬಂದು ಹೋಗಿದ್ದ. ಉಕ್ರೇನ್ನಲ್ಲಿ ಯುದ್ಧ ಆರಂಭವಾದಗಿನಿಂದ ನವೀನ್ ಕುಟುಂಬದ ಜೊತೆ ಮಾತನಾಡುತ್ತಿದ್ದರು.
ಯುದ್ಧ ಆರಂಭವಾದಗಿನಿಂದ ಮಗ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದೇವು. ಆದರೆ, ಇದೀಗ ಈ ವಿಷಯ ಬರ ಸಿಡಿಲು ಬಡಿದಂತೆ ಆಗಿದೆ ಎಂದು ಕುಟುಂಬಸ್ಥರು ಕಣ್ಣೀರಾಕಿದ್ದಾರೆ.
ಇನ್ನು ನವೀನ್ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಜಿಲ್ಲೆಯ ಅನೇಕ ಅಧಿಕಾರಿಗಳು ಕುಟುಂಬಸ್ಥರಿಗೆ ಬಂದು ಮಾಹಿತಿ ಖಚಿತ ಪಡಿಸಿ ಸಾಂತ್ವಾನ ತಿಳಿಸಿದ್ದಾರೆ.
ಉದಾಸಿ-ಜೋಶಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಪಾಲಕರು
ವೈದ್ಯಕೀಯ ಶಿಕ್ಷಣ ಪಡೆಯಲು ಕಡಿಮೆ ಹಣ ಇರುವುದರಿಂದ ಅಲ್ಲಿಗೆ ಮಕ್ಕಳನ್ನ ಕಳಿಸಿದ್ದೇವೆ. ಅದನ್ನ ಭಾರತದಲ್ಲೇ ಮಾಡಿದ್ರೇ, ನಾವೇಕೆ ಕಳಿಸುತ್ತಿದ್ದೇವು ಎಂದು ಹೇಳಿಕೊಳ್ಳುವುದಲ್ಲದೇ, ತಮ್ಮ ಇನ್ನುಳಿದ ಮಕ್ಕಳು ಬಾರದೇ ಇದ್ದರೇ ಸಂಸದ ಸಿ.ಎಂ.ಉದಾಸಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಾಲಕರು ಹೇಳಿದ್ದಾರೆ.