DISTRICT: ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದಿನ ಚೈನ್ ಗೇಟ್ ಬಳಿಯ ಡಿ.ಎಫ್.ಓ. ಬಂಗ್ಲೆ ಹತ್ತಿರ 5 ಜನರು ಅಕ್ರಮವಾಗಿ ಗಾಂಜಾ ಖರೀದಿಯ ವಿಚಾರದಲ್ಲಿ ಹಣಕಾಸಿನ ಬಗ್ಗೆ ಮಾತನಾಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತ ಮೇರೆಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಮಡಿಕೇರಿಯ ಡಿ.ಎಫ್.ಓ. ಬಂಗ್ಲೆ ಹತ್ತಿರ ಈ ಕೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 1 ಲಕ್ಷ 26 ಸಾವಿರ ರೂ. ಮೌಲ್ಯದ ಮಾದಕ ವಸ್ತು ಹಾಗೂ 2 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮೊಹಮ್ಮದ್ ಅಸ್ಲಾಂ ಕೆ.ಹೆಚ್., ಬೋಪಣ್ಣ ಕೆ.ಕೆ., ಅಕ್ಷಿತ್ ಸಿ.ಸಿ. ಅಲಿಯಾಸ್ ಚಿಟ್ಟಿಯಪ್ಪ, ಸುಮಂತ್ ಅಲಿಯಾಸ್ ಅಣ್ಣು ರಾಜೇಶ ಬಂಧಿತರು. ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕ್ಷಮಾ ಮಿಶ್ರಾರವರ ನಿದೇ೯ಶನದಂತೆ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ಸಕ೯ಲ್ ಇನ್ಸ್ ಪೆಕ್ಟರ್ ಪಿ.ವಿ.ವೆಂಕಟೇಶ್ ನೇತೃತ್ವದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷರಾದ ಅಂತಿಮ ಎಂ.ಟಿ, ಮಡಿಕೇರಿ ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಯಾದ .ಕೆ.ಕೆ.ದಿನೇಶ್, ಹೆಚ್.ಎಸ್.ಶ್ರೀನಿವಾಸ, ಪ್ರವೀ ಣ್ ಬಿ. ಕೆ. ನಾಗರಾಜ್ ಕಡಗಣ್ಣನವರ್ , ಸಿಬ್ಬಂದಿಯಾದ .ಅರುಣ್ ಕುಮಾರ್, ಬಿ.ಜಿ, .ಸುನೀಲ್ ಬಿ.ಓ., ಧರ್ಮ ಕೆ.ಎಂ., . ಎಲ್.ಎಸ್.ಶಶಿಕುಮಾರ್, ದಿವ್ಯ, ಸೌಮ್ಯ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.