DISTRICT:
ಕೋಲಾರ: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಕಳೆದ ವರ್ಷ ಕೃಷಿ ಉದ್ದೇಶಕ್ಕಾಗಿ ನೂರಾರು ಎಕರೆ ಜಮೀನು ಖರೀದಿಗೆ ಅವಕಾಶ ಕಲ್ಪಿಸಿತ್ತು. ಆ ಹಿನ್ನಲೆ ಹಾಗೂ ಬಂಡವಾಳ ಶಾಹಿಗಳು ಕೋಟ್ಯಾಂತರ ರೂ. ವೆಚ್ಚ ಮಾಡಿ ಇಂದು ಕೃಷಿ ಮೇಲೆ ಬಂಡವಾಳ ಹಾಕುತ್ತಿದ್ದಾರೆ. ಇದರಿಂದ ಸಣ್ಣಪುಟ್ಟ ರೈತರು ಬೆಳೆದ ಬೆಳೆಗಳನ್ನು ಕೊಳ್ಳುವವರು ಇಲ್ಲದಾಗಿದೆ.
ಕೋಲಾರ ಜಿಲ್ಲೆ ತರಕಾರಿ ಬೆಳೆಯುವುದಲ್ಲಿ ಪ್ರಸಿದ್ಧಿ ಅದರಲ್ಲೂ ಟೊಮ್ಯಾಟೋ ಬೆಳೆ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಜಿಲ್ಲೆಯಲ್ಲಿ ನೀರಿನ ಕೊರತೆಯಿದ್ದರೂ ಇಲ್ಲಿನ ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಟೊಮ್ಯಾಟೋ ಸೇರಿದಂತೆ ಹಲವು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಪ್ರತಿ ವರ್ಷ ಮೇ ತಿಂಗಳಿAದ ಆಗಸ್ಟ್ ತಿಂಗಳವರೆಗೂ ಟೊಮ್ಯಾಮೋ ಕೋಲಾರದಲ್ಲಿ ಹೆಚ್ಚು ಮಾರಾಟವಾಗುವ ಕಾರಣ ಈ ಸಮಯದಲ್ಲಿ ರೈತರು ಪ್ರತಿ ವರ್ಷ ಹೆಚ್ಚು ಟೊಮ್ಯಾಟೋ ಬೆಳೆಯುತ್ತಿದ್ದರು.
ಕಳೆದ ವರ್ಷ ಮಾರುಕಟ್ಟೆಯಲ್ಲಿ ಟಮೋಟ ಬೆಳೆಗೆ ಉತ್ತಮ ಬೆಲೆ ದೊರೆತ ಕಾರಣ ಈ ವರ್ಷ ಜಿಲ್ಲೆಯ ಪ್ರಮುಖ ರಾಜಕಾರಣಿಗಳು ಅದರಲ್ಲೂ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಮಾಲೂರು ಶಾಸಕ ನಂಜೇಗೌಡ ಹಾಗು ಬಿಜೆಪಿ ಜಿಲ್ಲಾಧ್ಯಕ್ಷಡಾ. ವೇಣುಗೋಪಾಲ್ ರಂತಹ ಜಿಲ್ಲೆಯ ಹಲವು ಪ್ರಮುಖ ರಾಜಕಾರಣಿಗಳು ತಮ್ಮ ಬೇರೆಬೇರೆ ಉದ್ದೇಶಗಳಿಗೆ ಒಬ್ಬೊಬ್ಬರು ನೂರಾರು ಎಕರೆ ಭೂ ಪ್ರದೇಶಗಳಲ್ಲಿ ಟೊಮ್ಯಾಟೋ ಬೆಳೆದಿದ್ದಾರೆ.
ಕೋಟ್ಯಂತರ ಹಣ ಹೊಂದಿರುವ ರಾಜಕಾರಣಿಗಳು ಹಾಗು ಬಂಡವಾಳಶಾಹಿಗಳು ತಮ್ಮ ಪ್ರಭಾವ ಬಳಸಿಕೊಂಡು ಹೊರ ರಾಜ್ಯಗಳ ವ್ಯಾಪಾರಸ್ಥರನ್ನು ನೇರವಾಗಿ ತಮ್ಮ ತೋಟಗಳ ಬಳಿಯೇ ಕರೆಸಿಕೊಂಡು ತೋಟಗಳಿಂದ ನೇರವಾಗಿ ಹೊರರಾಜ್ಯಗಳಿಗೆ ತಾವು ಬೆಳೆದ ಟಮೋಟವನ್ನು ಸೂಕ್ತ ಬೆಲೆಗೆ ವ್ಯಾಪಾರ ಮಾಡಿ ಕಳುಹಿಸಿಕೊಡಲಾಗುತ್ತಿದ್ದು, ಇದರಿಂದ ನೂರಾರು ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದ ಬಂಡವಾಳಶಾಹಿಗಳು ಲಾಭ ಗಳಿಸುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ದುಡಿದು ತಿನ್ನುವ ಬಡ ರೈತರು ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಬಂಡವಾಳ ಹಾಕಿ ಟೊಮ್ಯಾಟೊ ಬೆಳೆದು ಮಾರುಕಟ್ಟೆಗೆ ತಂದರೆ ಮಾರುಕಟ್ಟೆಯಲ್ಲಿ ಸಣ್ಣ ರೈತನ ಟೊಮ್ಯಾಟೋ ಕೊಂಡುಕೊಳ್ಳಲು ವ್ಯಾಪಾರಸ್ಥರಿಲ್ಲದೆ ಅತೀ ಕಡಿಮೆ ಬೆಲೆಗೂ ಟಮೋಟ ಮಾರಾಟವಾಗದೆ ತಾವು ಬೆಳೆದ ಬೆಳೆಯನ್ನು ರಸ್ತೆಗೆ ಸುರಿಯಬೇಕಾದ ಪರಿಸ್ಥಿತಿ ಏರ್ಪಟ್ಟಿದೆ.
ಬಂಡವಾಳಶಾಹಿಗಳು ಕೃಷಿಯಲ್ಲಿ ಹಸ್ತಕ್ಷೇಪ ಮಾಡಿದರೆ ಬಡ ರೈತರ ಪರಿಸ್ಥಿತಿ ತುಂಬಾ ಶೋಚನೀಯವಾಗಿರುತ್ತದೆ.