DISTRICT: ಧಾರವಾಡ : ಕೊರೊನಾ ಪಾಸಿಟಿವಿಟ್ ದರ 5ಕ್ಕಿಂತ ಕೆಇಮೆ ಇರುವ ಜಿಲ್ಲೆಗಳಲ್ಲಿ 2.0 ಅನ್ ಲಾಕ್ ಘೋಷಣೆ ಮಾಡಲಾಗಿದ್ದು, ಇದರಲ್ಲಿ ಧಾರವಾಡ ಜಿಲ್ಲೆಯು ಕೂಡಾ ಒಳಪಡುತ್ತದೆ, ಅಂಕಿ ಸಂಖ್ಯೆ ಗೊಂದಲಗಳಿಂದ ಅನ್ ಲಾಕ್ 1.0 ಮುದುವರಿಕೆ ಘೋಷಣೆಯಾಗಿದೆ. ಜಿಲ್ಲೆಯಲ್ಲಿ 5 ಕ್ಕಿಂತ ಕಡಿಮೆ ಪಾಸಿಟಿವಿಟ್ ರೇಟ್ ಇದೆ, ಹಾಗಾಗಿ ಸಚಿವ ಸುಧಾಕರವರ ಜೊತೆಗೆ ಮಾತಾಡಿದ್ದೇನೆ, ಜಿಲ್ಲೆಯಲ್ಲಿ ಪ್ರಸ್ತುತವಿರುವ ಲಾಕ್ ಸಡಿಲ್ಲಿಕೆ ಮಾಡಲಾಗುವುದು ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು. ಧಾರವಾಡ ಜಿಲ್ಲೆಯ ಪಾಸಿಟಿವಿಟಿ ದರ ನೋಡಿದಾಗ ಹತ್ತು ದಿನದಲ್ಲಿ 4 ಇದೆ, ಹಾಗಾಗಿ ಧಾರವಾಡ ಜಿಲ್ಲೆಯನ್ನು ಅನ್ ಲಾಕ್ ಮಾಡುವ ಕುರಿತು ಆರೋಗ್ಯ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅದನ್ನು ಪರಿಶೀಲನೆ ಮಾಡುತ್ತೆವೆ ಎಂದಿದ್ದಾರೆ. ಅಂಕಿ ಸಂಖ್ಯೆಯಲ್ಲಿ ಗೊಂದಲದಿಂದಾಗಿ, ಮೊದನೆಯ ಅನ್ ಲಾಕ್ ನಿಯಮ ಮುದುವರೆದಿದೆ. ಅದನ್ನು ಪರಿಶೀಲನೆ ಮಾಡಿ, ಅನ್ ಲಾಕ್ 2.0 ನಿಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಈಗಾಗಲೇ ಈ ಕುರಿತು ವ್ಯಾಪಾರ ವರ್ತಕರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಒತ್ತಾಯ ಮಾಡಿ ಇಂದು ಮನವಿಯನ್ನು ಕುಡಾ ನೀಡಿವೆ, ಇದರ ಕುರಿತು ಕೂಡಾ ನಾನು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡಸಿ ತೀರ್ಮಾಣ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.