DISTRICT:
ಮೈಸೂರು: ಒಮಿಕ್ರಾನ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಬೇರೆಬೇರೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲೆ, ಮೈಸೂರಿನ ಗಾಯತ್ರಿ ಚಿತ್ರಮಂದಿರವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕೊರೋನಾ ಆತಂಕದಿಂದಾಗಿ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಮತ್ತೊಂದೆಡೆ ಕರ್ಫ್ಯೂ ಆದೇಶದಿಂದ ಬಹಳಷ್ಟು ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ.
ಆದ್ರೆ ಈಗ ಮೈಸೂರಿನ ಪ್ರಸಿದ್ದ ಚಲನಚಿತ್ರ ಮಂದಿರ ಗಾಯತ್ರಿ ಚಿತ್ರಮಂದಿರದಿಂದ ನಷ್ಟ ಉಂಟಾದ ಪರಿಣಾಮ ಸರ್ಕಾರದ ನಿಯಮಗಳಂತೆ ಶೇ.50ರಷ್ಟು ಆಸನದ ವ್ಯವಸ್ಥೆ ಮಾಡಬೇಕಿತ್ತು. ಆದ್ರೆ ಗಾಯತ್ರಿ ಥಿಯೇಟರ್ನಲ್ಲಿ ಕನ್ನಡ ಸೇರಿದಂತೆ ಯಾವುದೇ ಭಾಷೆಯ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲು ಮಾಲೀಕರು ನಿರ್ಧರಿಸಿದ್ದಾರೆ.
ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಬಹಳಷ್ಟು ಹಳೆಯದಾದ ಗಾಯತ್ರಿ ಚಿತ್ರಮಂದಿರ ಕಳೆದ ವರ್ಷ ಕೊರೊನಾ ಸಂಕಷ್ಟಕ್ಕೆ ತುತ್ತಾಗಿತ್ತು.
ಕೆಲ ತಿಂಗಳ ಹಿಂದೆ ನಗರದ ಶಾಂತಲಾ, ಲಕ್ಷ್ಮಿ ಹಾಗೂ ಸರಸ್ವತಿ ಚಿತ್ರಮಂದಿರಗಳು ಮುಚ್ಚಿದ್ದವು. ಇದೀಗ ಗಾಯತ್ರಿ ಚಿತ್ರಮಂದಿರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಗಾಯತ್ರಿ ಥಿಯೇಟರ್ ಮಾಲೀಕ ರಾಜರಾಮ್ ಮಾಹಿತಿ ನೀಡಿದ್ದಾರೆ.