DISTRICT:
ಮೈಸೂರು: ದಸರಾ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮೊದಲು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದಾದ ಬಳಿಕ ಜಂಬೂಸವಾರಿಗೂ ಮುನ್ನ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಾಗುತ್ತದೆ. ನಂದಿ ಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಲಿದ್ದಾರೆ.
ಪೂಜೆ ಬಳಿಕ ಜಂಬೂ ಸವಾರಿ ಮೆರವಣಿಗೆ ಆರಂಭವಾಗಲಿದೆ. ನಾಳೆ ನಡೆಯಲಿರುವ ಜಂಬೂ ಸವಾರಿ, ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಇಡಲಾಗುತ್ತದೆ.
ನಾಳೆ ಬೆಳಿಗ್ಗೆ 7.40ರಿಂದ 8.00 ಒಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿ ಬೆಟ್ಟದಿಂದ ಈ ಮೆರವಣಿಗೆ ಹೊರಡಲಿದೆ. ಬಳಿಕ ಕುರಬಾರಹಳ್ಳಿ ಇಟ್ಟಿಗೆಗೂಡು ಗ್ರಾಮಸ್ಥರು ಸಾಂಪ್ರದಾಯಿಕ ಪೂಜೆ ಸಲ್ಲಿಸಲಿದ್ದಾರೆ.
ಉತ್ಸವ ಮೂರ್ತಿ ಅರಮನೆ ಪ್ರವೇಶ ಮಾಡಿಲಿದ್ದು, ಅರಮನೆ ಆಡಳಿತ ಮಂಡಳಿ ಸಂಪ್ರದಾಯಿಕವಾಗಿ ಉತ್ಸವ ಮೂರ್ತಿಯನ್ನ ಬರಮಾಡಿಕೊಳ್ಳಲಿದ್ದಾರೆ. ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಸೇರುವ ಸಾಧ್ಯತೆ ಇದೆ. ಇದಲ್ಲದೇ ಉತ್ಸವ ಮೂರ್ತಿ ಅರಮನೆಗೆ ಆಗಮಿಸುತ್ತಿದ್ದಂತೆ ಸಂಪ್ರದಾಯದಂತೆ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳಲಾಗುತ್ತದೆ.
ಇದಕ್ಕೂ ಮುನ್ನ ಅರಮನೆ ಖಜಾನೆಯಿಂದ ಜಿಲ್ಲಾಡಳಿತ ಮತ್ತು ರಾಜವಂಶ್ಥರ ಮುಂಭಾಗ ಚಿನ್ನದ ಅಂಬಾರಿಯನ್ನ ಹೊರತರಲಾಗುತ್ತದೆ. ಬಳಿಕ ಅಂಬಾರಿಯನ್ನ ಅಭಿಮನ್ಯು ಆನೆಗೆ ಅಂಬಾರಿಯನ್ನ ಕಟ್ಟಲಾಗುತ್ತದೆ.
ಅಂಬಾರಿ ಹೊತ್ತು ಸಾಗಿದ ಅಭಿಮನ್ಯುವಿಗೆ ಅಕ್ಕಪಕ್ಕದಲ್ಲಿ ಎರಡು ಆನೆಗಳು ಸಾಥ್ ನೀಡಲಿವೆ. ಅರಮನೆ ಮುಂಭಾಗ ಚಿನ್ನದ ಅಂಬಾರಿಗೆ ಉದ್ಘಾಟಕರಾದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.