DISTRICT:
ಬೆಂಗಳೂರು : ಉಕ್ರೇನ್ ನಲ್ಲಿ ಕ್ಷಣ ಕ್ಷಣಕ್ಕೂ ಬಾಂಬ್, ಶೆಲ್ ದಾಳಿ ನಡೆಯುತ್ತಿದೆ. ರಷ್ಯಾದ ದಾಳಿಯಿಂದಾಗಿ ಉಕ್ರೇನ್ ನಲ್ಲಿದ್ದ ಕರ್ನಾಟಕದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಕರ್ನಾಟಕದ ವಿದ್ಯಾರ್ಥಿ ಸಾವಿನ ವಿಚಾರವನ್ನು ಭಾರತೀಯ ವಿದೇಶಾಂಗ ಇಲಾಖೆ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ ಮೃತ ವಿದ್ಯಾರ್ಥಿಯನ್ನು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡರ್(22) ಎಂದು ಗುರುತಿಸಲಾಗಿದೆ.
ಉಕ್ರೇನ್ ಖಾರ್ಕಿವ್ನಲ್ಲಿ ಬೆಳಗ್ಗೆ ನಡೆದ ಶೆಲ್ ದಾಳಿಯ ವೇಳೆ ಭಾರತೀಯ ವಿದ್ಯಾರ್ಥಿವೊರ್ವ ಸಾವಿಗೀಡಾಗಿರುವುದು ಅತ್ಯಂತ ದುಃಖದ ವಿಚಾರ. ವಿದ್ಯಾರ್ಥಿಯ ಪೋಷಕರ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಪರ್ಕದಲ್ಲಿದೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ನವೀನ್ ಉಕ್ರೇನ್ಗೆ ತೆರಳಿದ್ದರು. ಖಾರ್ಕಿವ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ 4ನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಆದ್ರೆ ಅವರ ಕುಟುಂಬ ಚೈನೈನಲ್ಲಿ ನೆಲೆಸಿದೆ ಎನ್ನಲಾಗಿದೆ.
ಮೃತ ನವೀನ್ ಅವರು ತಾವು ಉಳಿದು ಕೊಂಡಿದ್ದ ನಿವಾಸದಿಂದ ಅಗತ್ಯ ಆಹಾರ ವಸ್ತುಗಳಿಗಾಗಿ ಹೊರ ಬಂದಾಗ ಶೆಲ್ ದಾಳಿಗೆ ಸಿಲುಕಿ ಮೃತರಾಗಿದ್ದಾರೆ.
ನವೀನ್ ಕುಟುಂಬದೊಂದಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಂಪರ್ಕದಲ್ಲಿದೆ ಎಂದು ಮಾಹಿತಿ ಲಭ್ಯವಾಗಿದೆ.