DISTRICT:
ಬೆಂಗಳೂರು: ರಾಜ್ಯದಲ್ಲಿ ಶ್ರೀಗಂಧ ಮರಗಳನ್ನು ರೈತರು ಬೆಳೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಅವಕಾಶ ಕಲ್ಪಿಸುವ “ಕರ್ನಾಟಕ ರಾಜ್ಯ ಶ್ರೀಗಂಧ ನೀತಿ-2022′ ಅನ್ನು ಸಚಿವ ಸಂಪುಟ ಅನುಮೋದಿಸಿದೆ.
“ಖಾಸಗಿ ಭೂಮಿಗಳಲ್ಲಿ ಶ್ರೀಗಂಧ ಮರಗಳನ್ನು ಬೆಳೆಸಲು ಉತ್ತೇಜನ ನೀಡಲೆಂದೇ ಶ್ರೀಗಂಧದ ಮರಗಳ ಕಡಿತ, ಸಾಗಣೆ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಸರಳೀಕರಿಸಲು ಶ್ರೀಗಂಧ ನೀತಿಯನ್ನು ರೂಪಿಸ ಲಾಗುವುದು’ ಎಂದು ಮುಖ್ಯ ಮಂತ್ರಿ ಬೊಮ್ಮಾಯಿ ಅವರು 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು.
ಸಚಿವ ಸಂಪುಟ ಸಭೆ ಬಳಿಕ ಸುದ್ದಿ ಗೋಷ್ಠಿ ನಡೆಸಿದ ಆರೋಗ್ಯ ಸಚಿವ ಡಾ| ಕೆ. ಸುಧಾಕರ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ತಕ್ಕಂತೆ ಶ್ರೀಗಂಧ ಪೂರೈಸಲು ಹಾಗೂ ರೈತರ ಆರ್ಥಿಕ ಸಶಕ್ತೀಕರಣಕ್ಕಾಗಿ ನೀತಿ ಜಾರಿಗೆ ತರಲಾಗುತ್ತಿದೆ ಎಂದರು.
ಶ್ರೀಗಂಧ ನೀತಿಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಶ್ರೀಗಂಧ ಕೃಷಿ ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಅವರೇ ಮಾರ ಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಶ್ರೀಗಂಧಕ್ಕೆ ಬೇಡಿಕೆ ಹೆಚ್ಚಿದ್ದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ ಬೇಕಾ ದಷ್ಟು ಶ್ರೀಗಂಧ ಸಿಗದೇ ಆಸ್ಟ್ರೇಲಿಯಾ ದಿಂದ ಆಮದು ಮಾಡಿ ಕೊಳ್ಳ ಲಾಗುತ್ತಿತ್ತು ಎಂದರು.
ಸರಕಾರಿ ಮತ್ತು ಖಾಸಗಿ ಜಾಗ ಗಳಲ್ಲಿ ಶ್ರೀಗಂಧ ಬೆಳೆಯಲು ಸೂಕ್ತ ಮಾರ್ಗದರ್ಶನ, ಬೆಳೆದ ಮರಗಳ ರಕ್ಷಣೆ, ಕಳವು ಮರಗಳಿಗೆ ಚಿಪ್‌ಗ್ಳನ್ನು ಅಳವಡಿಸಲಾಗುವುದು ಎಂದರು.