DISTRICT:
ಮನುಷ್ಯರು ಹುಟ್ಟು ಹಬ್ಬ ಆಚರಿಸಿಕೊಳ್ಳುವುದು ರೂಡಿಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೂ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸುವುದನ್ನು ಗಮನಿಸಬಹುದಾಗಿದೆ. ಅಂದಹಾಗೆ ಇಲ್ಲೊಬ್ಬ ಕುರಿಯ ಮಾಲೀಕ ಕುರಿ ಒಂದು ವರ್ಷ ಪೂರೈಸಿದೆ ಎಂದು ಹೇಳಿ ಕುರಿಗೆ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಅಂದಹಾಗೆ ಇದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ಕಿಟ್ಟಪ್ಪ ಎಂಬ ಕುರಿ ಮಾಲೀಕ ಪ್ರೀತಿಯಿಂದ ಒಂದು ಕುರಿ ಸಾಕಿದ್ದನು. ಅದು ಒಂದು ಮರಿಗೆ ಜನ್ಮ ನೀಡಿ, ಕುರಿ ಮೃತಪಟ್ಟಿತ್ತು. ಮರಿಯ ಜೊತೆಗೆ ಇನ್ನೊಂದು ಮರಿ ತಂದು ಮುದ್ದಾಗಿ ಎರಡು ಕುರಿ ಮರಿ ಸಾಕಿದ್ದನು. ಆ ಎರಡು ಕುರಿಯರಿಯಲ್ಲಿ ಒಂದು ಮರಿಗೆ ಒಂದು ವರ್ಷ ತುಂಬಿದೆ. ಒಂದು ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ಐದು ಕೆಜಿ ಕೇಕ್ ಕತ್ತರಿಸಿ ಕುರಿಗೆ ಕೇಕ್ ತಿನ್ನಿಸುವ ಮೂಲಕ ಆ ಕುರಿಯ ಮೊದಲನೇ ವರ್ಷದ ಬರ್ತಡೇ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಅದಲ್ಲದೇ ಅಕ್ಕಪಕ್ಕದ ಮನೆಯವರು ಸಹ ಈ ಬರ್ತಡೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುರಿಗೆ ಶುಭ ಹಾರೈಸಿದ್ದಾರೆ. ಕುರಿ ಬರ್ತಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಕೇಕ್, ಕಾರ ವಿತರಿಸಲಾಗಿದೆ. ವಿಶೇಷ ಎಂದರೆ ಕುರಿಮರಿ ಬರ್ತಡೇ ಅಂಗವಾಗಿ ಅಕ್ಕಪಕ್ಕದವರು ಗಿಫ್ಟ್ ರೂಪದಲ್ಲಿ ಕಾಣಿಕೆ ನೀಡಿ ಕುರಿಗೆ ಶುಭಾಶಯ ತಿಳಿಸಿದ್ದಾರೆ.