DISTRICT:
ದಾವಣಗೆರೆ: ಉಡುಪಿ ಪೇಜಾವರ ಮಠ ದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ದಲಿತರ ಮನೆಗಳಿಗೆ ಭೇಟಿ ನೀಡಿ ನಾವೆಲ್ಲರೂ ಒಂದೇ, ಜಾತಿ ಭೇದ ಭಾವ ಇಲ್ಲ ಎಂಬ ಸಂದೇಶವನ್ನು ಸಾರುತ್ತಿದ್ದರು.
ಇದೀಗ ಇವರದ್ದೇ ಮಾರ್ಗದಲ್ಲಿ ನಡೆಯುತ್ತಿರುವ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಬಿಜೆಪಿ ದಲಿತ ಮುಖಂಡರೊಬ್ಬರ ಮನೆಗೆ ಭೇಟಿ ನೀಡಿದ್ದಾರೆ. ಪಾದ ಪೂಜೆ ಹಿನ್ನೆಲೆ ದಾವಣಗೆರೆ ನಗರದ ಜಯ ನಗರದಲ್ಲಿ ಇರುವ ಬಿಜೆಪಿ ಮುಖಂಡ ಆಲೂರು ಲಿಂಗರಾಜ್ ಅವರ ಮನೆಗೆ ಶ್ರೀಗಳು ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಶ್ರೀಗಳು, ರಾಮಮಂದಿರ ಆಯಿತು, ಇನ್ನೂ ರಾಮರಾಜ್ಯ ಆಗಬೇಕಿದೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ತುರ್ತಾಗಿ ನಡೆದಿದೆ. ಬರುವ 2024 ಜನವರಿಯ ಮಕರ ಸಂಕ್ರಾಂತಿ ವೇಳೆ ನಿರ್ಮಾಣ ಪೂರ್ಣವಾಗಲಿದೆ. ರಾಮಮಂದಿರ ಮುಕ್ತಾಯದ ನಂತರ ಮುಂದೇನು ಎಂಬ ಚಿಂತನೆ ನಡೆದಿದೆ. ದೇಶವನ್ನು ರಾಮರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.