DISTRICT:
ಕಾರವಾರ : ಕೋವಿಡ್ ನಿಯಮ ಉಲ್ಲಂಘಿಸಿ ಸಿದ್ದಾಪುರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಶನಿವಾರ ಔತಣಕೂಟ ಏರ್ಪಡಿಸಲಾಗಿತ್ತು. ಶಿಕ್ಷಕರ ಸಂಘದಿಂದ ಏರ್ಪಡಿಸಲಾಗಿದ್ದ ಔತಣ ಕೂಟದಲ್ಲಿ ಸುಮಾರು 30 ರಿಂದ 35 ಜನ ಶಿಕ್ಷಕರು ಭಾಗಿಯಾಗಿದ್ದರು.
ಈ ಔತಣ ಕೂಟದಲ್ಲಿ ಸಾಮಾಜಿಕ ಅಂತರವೂ ಕೂಡ ಇರಲಿಲ್ಲ. ರಾಜ್ಯಾದ್ಯಂತ ವೀಕೆಂಡ್ ಲಾಕ್ ಡೌನ್ ಇದ್ರೂ ಕೂಡ ಶಿಕ್ಷಕರು ತಲೆಕೆಡಿಸಿಕೊಳ್ಳದೇ ಔತಣಕೂಟ ಮಾಡಿದ್ದು, ಸಿದ್ಧಾಪುರ ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಸಹ ಭಾಗಿಯಾಗಿದ್ದರು.
ನಿಯಮದ ಬಗ್ಗೆ ತಿಳಿಹೇಳಬೇಕಾದವರಿಂದಲೇ ನಿಯಮ ಉಲ್ಲಂಘನೆ ಆಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗ್ರಾಸವಾಗಿದೆ.