NEWS: ಕೊರೊನ ಮೂಲವನ್ನು ಪತ್ತೆಹಚ್ಚದಿದ್ದಲ್ಲಿ ಜಗತ್ತಿಗೆ ಮತ್ತಷ್ಟು ಅಪಾಯ ಎದುರಾಗಲಿದೆ. ಚೀನಾ ಸರ್ಕಾರ ಜಗತ್ತಿಗೆ ಸಹಕಾರ ನೀಡಿದಲ್ಲಿ ಭವಿಷ್ಯದಲ್ಲಿ ಜಗತ್ತಿಗೆ ಉಂಟಾಗಬಹುದಾದ ಮತ್ತಷ್ಟು ಅಪಾಯವನ್ನು ತಪ್ಪಿಸಬಹುದು ಎಂದು ಅಮೆರಿಕದ ತಜ್ಞರು ಅಭಿಪ್ರಾಯಪಟ್ಟಿರುವುದು ವರದಿಯಾಗಿದೆ. ಚೀನಾದ ವುಹಾನ್ ನಗರದ ಪ್ರಯೋಗಾಲಯದಿಂದ ತಪ್ಪಿಸಿಕೊಂಡು ಹೊರಬಂದ ವೈರಸ್ ಕೋವಿಡ್-19ಗೆ ಕಾರಣವೆಂಬ ಗುಮಾನಿ ಬಲಗೊಂಡಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯ ಮಾಜಿ ಕಮೀಷನರ್ ಸ್ಕಾಟ್ ಗೋಟ್ಲಿಬ್ ತಿಳಿಸಿದ್ದಾರೆ. ಕೋವಿಡ್ ಹೇಗೆ ಸೃಷ್ಟಿಯಾಯಿತು ಎಂಬುದನ್ನು ತಿಳಿಯಲು ಸಾಧ್ಯವಾಗದೇ ಹೋದಲ್ಲಿ ಜಗತ್ತು ಇಂತಹ ಇನ್ನಷ್ಟು ಸಾಂಕ್ರಾಮಿಕಗಳಿಗೆ ತುತ್ತಾಗಬಹುದು. ಮುಂದೆ ಕೋವಿಡ್-26, ಕೋವಿಡ್-32 ಇತ್ಯಾದಿ ರೋಗಗಳೂ ಬರಬಹುದು ಎಂದು ಟೆಕ್ಸಾಸ್ ಮಕ್ಕಳ ಆಸ್ಪತ್ರೆಯ ಲಸಿಕೆ ಅಭಿವೃದ್ಧಿ ಕೇಂದ್ರದ ಸಹನಿರ್ದೇಶಕ ಪೀಟರ್ ಹೊಟೇಝ್ ಟಿವಿ ಕಾರ್ಯಕ್ರಮದಲ್ಲಿ ಅಭಿಪ್ರಾಯಿಸಿದ್ದಾರೆ.