NEWS:
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ 31ನೇ ದಿನಕ್ಕೆ ಕಾಲಿಟ್ಟಿದೆ. ಯುದ್ದದಲ್ಲಿ ಸಾವಿರಾರು ಅಮಾಯಕ ಜೀವಗಳು ಕಣ್ಣು ಮುಚ್ಚುತ್ತಿವೆ. ಯುದ್ದ ಯಾವಾಗ ನಿಲ್ಲುತ್ತೆ ಅಂತ ಪ್ರತಿಯೊಬ್ಬರು ಎದುರು ನೋಡ್ತಿದ್ದಾರೆ. ಈ ಮಧ್ಯೆ ರಷ್ಯಾದಲ್ಲಿ ಕಾಂಡೋಮ್ ಖರೀದಿ ಹೆಚ್ಚುತ್ತಿರುವ ಬಗ್ಗೆ ವರದಿಯಾಗಿದೆ.
ಯುದ್ದ ಶುರವಾದ ಬಳಿಕ ರಷ್ಯಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದೇಶಗಳು ನಿರ್ಬಂಧ ವಿಧಿಸಿವೆ. ಹೀಗಾಗಿ ಅಮೆರಿಕ ಮತ್ತು ಐರೋಪ್ಯ ದೇಶಗಳಿಂದ ಆಮದಾಗುತ್ತಿದ್ದ ಹಲವು ವಸ್ತುಗಳು ರಷ್ಯಾಗೆ ರವಾನೆಯಾಗುವುದು ಸ್ಥಗಿತಗೊಂಡಿವೆ.
ರಷ್ಯಾಗೆ ರವಾನೆಯಾಗುತ್ತಿರುವ ಪ್ರಮುಖ ವಸ್ತುಗಳಲ್ಲಿ ಕಾಂಡೋಮ್ ಗಳು ಪ್ರಮುಖವಾದವು. ಹೀಗಾಗಿ ಎಲ್ಲಿ ಕಾಂಡೋಮ್ ಸರಬರಾಜು ನಿಂತು ಹೋಗಲಿದೆ ಎನ್ನುವ ಭೀತಿಯಿಂದ ನಾಗರಿಕರು ಹೆಚ್ಚು ಹೆಚ್ಚು ಕಾಂಡೋಮ್ ಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ ಎಂದು ಪರಿಣತರು ಅಂದಾಜಿಸಿದ್ದಾರೆ.