SPORTS:
ಬೆಂಗಳೂರು : 1960 ರ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಫುಟ್ಬಾಲ್ ಆಟಗಾರ ಸಯ್ಯದ್ ಶಾಹಿದ್ ಹಕೀಮ್ ಭಾನುವಾರ ಬೆಳಿಗ್ಗೆ ಗುಲ್ಬರ್ಗದಲ್ಲಿ ವಿಧಿವಶರಾದರು.
ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ವರ್ಷ ಕೋವಿಡ್ ಸೋಂಕಿನಿಂದ ಗೆದ್ದು ಬಂದಿದ್ದ ಹಕೀಮ್ ಅವರಿಗೆ ಭಾನುವಾರ ಬೆಳಿಗ್ಗೆ ಹೃದಯಾಘಾತವಾಗಿತ್ತು.
ಖ್ಯಾತ ಫುಟ್ಬಾಲ್ ತರಬೇತುದಾರ ಎಸ್. ಎ. ರಹೀಮ್ ಅವರ ಮಗನಾಗಿದ್ದ ಹಕೀಮ್ 1960 ರ ರೋಮ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಜೀವನಶ್ರೇಷ್ಠ ಸಾಧನೆಗಾಗಿ ಹಕೀಮ್ ಅವರಿಗೆ 2017ರಲ್ಲಿ ಧ್ಯಾನ್ ಚಂದ್ ಪ್ರಶಸ್ತಿ ನೀಡಲಾಗಿತ್ತು. ಈ ಗೌರವಕ್ಕೆ ಪಾತ್ರರಾದ ಎರಡನೇ ಫುಟ್ಬಾಲ್ ಆಟಗಾರರೆನಿಸಿದ್ದಾರೆ.