SPORTS:
ಬೆಂಗಳೂರು: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಆಕ್ಷನ್ಗೆ ಕೌಂಟ್ ಡೌನ್ ಶುರುವಾಗಿದೆ. ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ನಡೆಯುತ್ತಿದೆ.
ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಹಾಗೂ ಅಹಮದಾಬಾದ್ ಸೇರಿ ಒಟ್ಟು 10 ಫ್ರಾಂಚೈಸಿಗಳು ಕೋಟಿ ಕೋಟಿ ರು. ಹಣ ಖರ್ಚು ಮಾಡಿ ಬಲಿಷ್ಠ ತಂಡ ಕಟ್ಟಲು ಎದುರು ನೋಡುತ್ತಿವೆ. ಈ ವರ್ಷ ಹರಾಜಿನಲ್ಲಿ ಹಲವು ಆಟಗಾರರು ಕೋಟ್ಯಧಿಪತಿಗಳಾಗಲಿದ್ದಾರೆ. ಕನಿಷ್ಠ 10 ಆಟಗಾರರು 10 ಕೋಟಿ ರು.ಗಿಂತ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ಸಾಧ್ಯತೆ ಇದೆ.ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಟಗಾರರ ಮೌಲ್ಯ 20 ಕೋಟಿ ರು. ತಲುಪಿದರೂ ಅಚ್ಚರಿಯಿಲ್ಲ.