SPORTS:
ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದ ಸುರೇಶ್ ರೈನಾ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದಾರೆ. ರೈನಾ ಪುಷ್ಪಾ ಶೈಲಿಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದು ಮತ್ತು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ, "ಫೈರ್ ಹೈ ಮೈ .. ಜುಕೆಗಾ ನಹೀ…” ಎಂದು ಬರೆದಿದ್ದಾರೆ.
ಮೆಗಾ ಹರಾಜಿನಲ್ಲಿ ರೈನಾ ಅವರ ಮೂಲ ಬೆಲೆಯನ್ನು 2 ಕೋಟಿ ರೂ.ಆಗಿತ್ತು. ಆದರೆ ಯಾವುದೇ ಫ್ರಾಂಚೈಸಿಗಳು ಅವರ ಮೇಲೆ ಮನಸ್ಸು ಮಾಡಿರಲಿಲ್ಲ. ಈ ಮಧ್ಯೆ, ಗುಜರಾತ್ ಟೈಟಾನ್ಸ್ ಸುರೇಶ್ ರೈನಾ ಅವರನ್ನು ತಮ್ಮ ತಂಡದ ಭಾಗವಾಗಿಸಬಹುದು ಎಂಬ ಊಹಾಪೋಹ ಶುರುವಾಗಿದೆ.
ಸುರೇಶ್ ರೈನಾ ಗುಜರಾತ್ ಲಯನ್ಸ್ ತಂಡದ ನಾಯಕರಾಗಿ 2 ವರ್ಷಗಳ ಕಾಲ ಆಡಿದ್ದಾರೆ. 2016 ಮತ್ತು 17ರಲ್ಲಿ ಸ್ಪಾಟ್ ಫಿಕ್ಸಿಂಗ್‌ಗಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾದಾಗ, ಗುಜರಾತ್ ಲಯನ್ಸ್ ತಂಡವು ಎರಡು ವರ್ಷಗಳ ಕಾಲ ಈ ಪಂದ್ಯಾವಳಿಯಲ್ಲಿ ಆಡುತ್ತಿರುವುದು ಕಂಡುಬಂದಿದೆ ಮತ್ತು ರೈನಾ ಈ ತಂಡದ ನಾಯಕರಾಗಿದ್ದರು.
ರೈನಾ ಅವರನ್ನು ಗುಜರಾತ್ ತಂಡಕ್ಕೆ ಸೇರಿಸಿಕೊಳ್ಳಲು ಅವರ ಅಭಿಮಾನಿಗಳು ಪ್ರಚಾರವನ್ನೂ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗಾಗಿ ನಿರಂತರವಾಗಿ ಟ್ವೀಟ್‌ಗಳು ನಡೆಯುತ್ತಿವೆ.
ಇಂಗ್ಲೆಂಡ್ ಆರಂಭಿಕ ಆಟಗಾರ ಜೇಸನ್ ರಾಯ್ ಐಪಿಎಲ್ 2022 ರಿಂದ ಹಿಂದೆ ಸರಿದಿದ್ದಾರೆ. ಅವರು ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದರು. ಬಹುಕಾಲ ಬಯೋ ಬಬಲ್ ನಲ್ಲಿ ಇರದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ತಂಡದ ಫ್ರಾಂಚೈಸಿ ರೈನಾ ಅವರನ್ನು ಅವರ ಬದಲಿಗೆ ಸೇರಿಸಿಕೊಳ್ಳಬಹುದು. ರಾಯ್ ಅವರನ್ನು ತಂಡವು 2 ಕೋಟಿ ರೂ.ಗೆ ಖರೀದಿಸಿತ್ತು ಮತ್ತು ರೈನಾ ಅವರ ಮೂಲ ಬೆಲೆ ಕೂಡ 2 ಕೋಟಿ ರೂ. ಆಗಿದೆ.
ಗುಜರಾತ್ ತಂಡದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಹೊರತುಪಡಿಸಿ, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಸಾಯಿ ಸುದರ್ಶನ್, ಅಭಿನವ್ ಸದ್ರಂಗನಿ ಅವರಂತಹ ಬ್ಯಾಟ್ಸ್‌ಮನ್‌ಗಳಿದ್ದರೂ ಅನುಭವಿ ಭಾರತೀಯ ಆಡಟಗಾರರಿಲ್ಲ. ಫ್ರಾಂಚೈಸಿ ಬ್ಯಾಟಿಂಗ್ ಲೈನ್-ಅಪ್ ಅನ್ನು ಬಲಪಡಿಸಲು ತಂಡವು ರೈನಾ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ.