SPORTS:
ಬೆಂಗಳೂರು : ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 14 ವರ್ಷ ವಯೋಮಿತಿಯ ಎಐಟಿಎ ಟೆನಿಸ್ ಚಾಂಪಿಯನ್ಷಿಪ್ ನಲ್ಲಿ ಸಂಚಿತ್ ಮತ್ತು ವರುಣ್ಯ ಅನುಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.
ಫಾರ್ಚೂನ್ ಸ್ಪೋರ್ಟ್ಸ್ ಅಕಾಡೆಮಿ ಈ ಟೂರ್ನಿಯನ್ನು ಆಯೋಜಿಸಿತ್ತು. 7ನೇ ಶ್ರೇಯಾಂಕಿತ ಸಂಚಿತ್ 5ನೇ ಶ್ರೇಯಾಂಕಿತ ಶ್ರೀಕರ್ ದೋನಿ ವಿರುದ್ಧ 6-3, 6-7(3), 7-5 ಅಂತರದಲ್ಲಿ ಜಯ ಗಳಿಸಿದರು.
ಎರಡನೇ ಶ್ರೇಯಾಂಕಿತೆ ವರುಣ್ಯ 6-2, 6-2 ನೇರ ಸೆಟ್ ಅಂತರದಲ್ಲಿ ಮಹಿಕಾ ರೆಡ್ಡಿಗೆ ಸೋಲುಣಿಸಿ ಪ್ರಶಸ್ತಿ ಗೆದ್ದುಕೊಂಡರು.