SPORTS:
ಟೋಕಿಯೋ: ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಅನೇಕ ಆಟಗಾರರು ತಮ್ಮ ಪದಕದ ಹಾದಿ ಸುಗಮವಾಗಬಹುದು ಎಂದು ಊಹಿಸಿರಬಹುದು, ಆದರೆ ಜೊಕೊವಿಕ್ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ.
ಒಂದು ವರ್ಷದಲ್ಲಿ ನಾಲ್ಕು ಗ್ರ್ಯಾನ್ ಸ್ಲಾಮ್ ಮತ್ತು ಒಂದು ಒಲಿಂಪಿಕ್ಸ್ ಪದಕಕ್ಕೆ ಗುರಿ ಇಟ್ಟಿರುವ ಜೊಕೊವಿಕ್,” ಸರ್ಬಿಯಾಕ್ಕಾಗಿ ಆಡುವುದು ನನಗೆ ಯಾವತ್ತೂ ಸ್ಫೂರ್ತಿದಾಯಕ, ಎಲ್ಲರೂ ಖುಷಿಯಾಗಿರಲು ನಾನು ನನ್ನಿಂದಾದ ಪ್ರಯತ್ನ ಮಾಡುತ್ತೇನೆ,” ಎಂದು ಜೊಕೊವಿಕ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಮತ್ತು ಫ್ರೆಂಚ್ ಓಪನ್ ಗೆದ್ದ ನಂತರ ವಿಂಬಲ್ಡನ್ ಕಿರೀಟ ಧರಿಸಿರುವ 34 ವರ್ಷದ ಜೊಕೊವಿಕ್, “ನನ್ನ ಚಿಕ್ಕ ಗೆಳೆಯ ಕೌಜಿರೌ ಅವರಿಗೆ ನಿರಾಸೆ ಮಾಡುವುದಿಲ್ಲ. ಟೋಕಿಯೋಕ್ಕೆ ಪ್ರಯಾಣಿಸಲು ನಾನು ನನ್ನ ವಿಮಾನದ ಟಿಕೆಟನ್ನು ಕಾಯ್ದಿರಿಸಿರುವೆ, ಅಲ್ಲಿ ನಮ್ಮ ತಂಡವನ್ನು ಸೇರಿಕೊಳ್ಳುವೆ,” ಎಂದು ಹೇಳಿದ್ದಾರೆ.