SPORTS:
ಮುಂಬೈ: ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಭಾರತದ ಟೆಸ್ಟ್ ಆಟಗಾರ ಶುಬ್ಮನ್ ಗಿಲ್ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿರುವ ಪೃಥ್ವಿ ಶಾ ಅವರು ಗಿಲ್ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ ಮುಗಿಯುತ್ತಿದ್ದಂತೆ ಗಿಲ್ ಗಾಯಗೊಂಡ ವಿಷಯ ಬಹಿರಂಗೊಂಡಿತ್ತು. ಆದರೆ ಗಾಯದಿಂದ ಚೇತಿರಿಸಿಕೊಳ್ಳಬಹುದೆಂದು ತಂಡದ ಆಡಳಿತ ಮಂಡಳಿ ಊಹಿಸಿತ್ತು. ಆದರೆ ಗಾಯ ತೀವ್ರಗೊಂಡಿದ್ದು ಚೇತರಿಕೆಗೆ ಇನ್ನೂ ಮೂರಿ ತಿಂಗಳು ಬೇಕಾಗಬಹುದು ಎಂದು ವೈದ್ಯರು ಸಲಹೆ ನೀಡಿದ ಕಾರಣ ಅವರನ್ನು ಭಾರತಕ್ಕೆ ಕಳುಹಿಸುವುದು ಅನಿವಾರ್ಯವಾಯಿತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಆದರೆ ಗಿಲ್ ಅವರ ಬದಲಿಗೆ ತಂಡ ಇದುವರೆಗೂ ಯಾವುದೇ ಬದಲಿ ಆಟಗಾರರನ್ನು ಕೇಳಿಲ್ಲ ಎಂದೂ ವರದಿ ತಿಳಿಸಿದೆ.