SPORTS:
ಲಂಡನ್: ಕೇವಲ 15 ಗ್ರ್ಯಾನ್ ಸ್ಲಾಮ್ ಪಂದ್ಯಗಳನ್ನು ಆಡಿರುವ ಪೊಲೆಂಡ್ ನ ಹುಬೆರ್ಟ್ ಹುರ್ಕಾಜ್ 20 ಗ್ರ್ಯಾನ್ ಸ್ಲಾಮ್ ಗೆದ್ದರುವ ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ಗೆ ವಿಂಬಲ್ಡ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿನ ಆಘಾತ ನೀಡಿದ್ದಾರೆ.
ವಿಶ್ವದ ಶ್ರೇಷ್ಠ ಆಟಗಾರ ಫೆಡರರ್ ವಿರುದ್ಧ ಅದ್ಭುತ ಆಟ ಪ್ರದರ್ಶಿಸಿದ ಹುಬೆರ್ಟ್ 6-3, 7-6 (7-5), 6-0 ನೇರ ಸೆಟ್ ಗಳಿಂದ ಆಘಾತ ನೀಡಿದರು.
8 ಬಾರಿ ವಿಂಬಲ್ಡನ್ ಚಾಂಪಿಯನ್ ಪಟ್ಟ ಗೆದ್ದಿರುವ ರೋಜರ್ ಫೆಡರರ್ ಅವರ ಈ ಸೋಲು ವಿಂಬಲ್ಡನ್ ಇತಿಹಾಸದಲ್ಲೇ ದೊಡ್ಡ ಆಘಾತ ಎನ್ನಲಾಗಿದೆ.
ದಿನದ ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಲೋವಿಕ್ ಹಂಗೇರಿಯ ಮಾರ್ಟನ್ ಫಕ್ಸೋವಿಕ್ಸ್ ವಿರುದ್ಧ 6-3,6-4,6-4 ನೇರ ಸೆಟ್ ಗಳಿಂದ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿದರು. ನೊವಾಕ್ ಜೊಕೋವಿಕ್ ಅವರಿಗೆ ಹುಲ್ಲಹಾಸಿನ ಅಂಗಣದಲ್ಲಿ ಇದು 100ನೇ ಜಯವಾಗಿದೆ.
ಮಿಶ್ರಡಬಲ್ಸ್ ನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿಗೆ ಸೋಲಾಗಿದೆ.